ಹಾಸನ: ಬೈಕ್ಗಳು ಢಿಕ್ಕಿ ಹೊಡೆದ ಪರಿಣಾಮ ನಡೆದ ಭೀಕರ ಅಪಘಾತದಲ್ಲಿ ಯುವಕರಿಬ್ಬರು ಮೃತಪಟ್ಚ ಘಟನೆ ಗುಟ್ಟೇನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ನಡೆದಿದೆ.
ಮೃತರನ್ನು ಗುಟ್ಟೇನಹಳ್ಳಿ ನಿವಾಸಿ ರಾಕೇಶ್ (28) ಮತ್ತು ವಲ್ಲಭಾಯಿ ರಸ್ತೆಯ ಮಯೂರ(25) ಎಂದು ಗುರುತಿಸಲಾಗಿದೆ.
ರಾಕೇಶ್ ಅವರ ಬೈಕ್ ಮತ್ತು ಮಯೂರ್ ಅವರ ಹೋಂಡಾ ಆಕ್ಟಿವಾ ನಡುವೆ ಅಪಘಾತ ಸಂಭವಿಸಿರುವುದಾಗಿದೆ. ಸವಾರರ ಅತಿ ವೇಗ ಮತ್ತು ನಿಯಂತ್ರಣ ತಪ್ಪಿದ ಕಾರಣವೇ ಈ ಅಪಘಾತ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸವಾರರು ರಸ್ತೆಗೆ ಬಿದ್ದಿದ್ದು, ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯಗಳಾಗಿವೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
























