ಕಡಬದ ‌ಯುವಕ ಐರ್ಲೆಂಡಿನಲ್ಲಿ ಮೃತಪಟ್ಟ ‌ಸ್ಥಿತಿಯಲ್ಲಿ ಪತ್ತೆ

ಕಡಬ: ಉದ್ಯೋಗಕ್ಕಾಗಿ ಐರ್ಲೆಂಡಿಗೆ ತೆರಳಿದ್ದ ಕಡಬದ ಯುವಕನೊಬ್ಬ ತನ್ನ ನಿವಾಸದಲ್ಲೇ ನಿಗೂಢವಾಗಿ ಮೃತಪಟ್ಚಿರುವ ಘಟನೆ ನಡೆದಿದೆ.

ಮೃತನನ್ನು ಕುಟ್ರುಪ್ಪಾಡಿ ಗ್ರಾಮದ ವಿಮಲಗಿರಿಯ ಸಾಂಜೋ ‌ಸುನಿಲ್ (31) ಎಂದು ಗುರುತಿಸಲಾಗಿದೆ.

ಸಾಂಜೋ ಅವರು ಐರ್ಲೆಂಡಿನ ತಮ್ಮ ನಿವಾಸದಲ್ಲಿ ಶವವಾಗಿ ‌ಪತ್ತೆಯಾಗಿದ್ದು, ಐರಿಶ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ. ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ.





















































 
 

ಪತಿಯ ಸಾವಿನ ವಿಷಯ ಕೇಳಿದ ಸಾಂಜೋ ಅವರ ಪತ್ನಿ ಆಘಾತಕ್ಕೆ ಒಳಗಾಗಿ ಅಸ್ವಸ್ಥರಾಗಿದ್ದಾಗಿ ತಿಳಿದು ಬಂದಿದೆ. ವರ್ಷದ ಹಿಂದಷ್ಟೇ ಇವರ ವಿವಾಹ ನಡೆದಿತ್ತು. ತಿಂಗಳ ಹಿಂದಷ್ಟೇ ಅವರು ಐರ್ಲೆಂಡ್‌ಗೆ ಉದ್ಯೋಗಕ್ಕಾಗಿ ತೆರಳಿದ್ದರು. ಈ ಹಿಂದೆ ಅವರು ಇಸ್ರೇಲೀನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರು.

error: Content is protected !!
Scroll to Top