ಕಡಬ: ತಮ್ಮ ತೋಟದಿಂದ ಅಡಿಕೆ ಕಳ್ಳತನ ಮಾಡಿರುವುದಾಗಿ ಅಲಂಕಾರಿನ ಸತೀಶ್ ಎಂಬವರು ಜ. 25ರಂದು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಪ್ರಕರಣದ ಆರೋಪಿಗಳಲ್ಲಿ ಓರ್ವನಿಗೆ ನ್ಯಾಯಾಂಗ ಬಂಧನ ಮತ್ತು ಇನ್ನೊಬ್ಬನಿಗೆ ನಿರೀಕ್ಷಣಾ ಜಾಮೀನು ಲಭಿಸಿದೆ.
ಸತೀಶ್ ಅವರ ತೋಟದಿಂದ ಅಡಿಕೆ ಕಳವು ಮಾಡಿ ಆರೋಪಿಗಳಾದ ಕಾಯಿಕಾಣ ಗ್ರಾಮದ ಜಯಂತ್ ಎಂ. ಮತ್ತು ಕಾಣಿಯೂರು ಗ್ರಾಮದ ಲಿಂಗಪ್ಪ ಎಂಬವರು ಪರಾರಿಯಾಗಿದ್ದರು.
ಈ ಸಂಬಂಧ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳ ಪೈಕಿ ಜಯಂತ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಎರಡನೇ ಆರೋಪಿ ಲಿಂಗಪ್ಪನಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
























