ಕಾನೂನುಬಾಹಿರ ಮಟ್ಕಾ ಆಟ ಆಡಿಸುತ್ತಿದ್ದ ಆರೋಪಿಯ ಬಂಧನ

ವಿಟ್ಲ: ಕಾನೂನುಬಾಹಿರವಾಗಿ ನಗರದ ಬೇಕರಿಯೊಂದರಲ್ಲಿ ಅದೃಷ್ಟದ ಮಟ್ಕಾ ಆಡಿಸುತ್ತಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕೇಪು‌ವಿನ ಅಡ್ಯನಡ್ಕ ಎಂಬಲ್ಲಿರುವ ವಿನಾಯಕ ಬೇಕರಿಯಲ್ಲಿ ಮಟ್ಕಾ ಆಟ ನಡೆಯುತ್ತಿರುವ ಖಚಿತ ಮಾಹಿತಿಯ ಮೇಲೆ ಪೊಲೀಸರು ದಾಳಿ ನಡೆಸಿರುವುದಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಬೇಕರಿಯ ಮಾಲೀಕ, ಕುದ್ದುಪದವು ನಿವಾಸಿ ರವೀಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಮೊಬೈಲ್ ಫೋನ್, ನಗದು ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.





















































 
 

error: Content is protected !!
Scroll to Top