ಕಲಬುರ್ಗಿ: ಶಾಲೆಯ ಬಾವಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಬಬಲಾದ ಡಾನ್ ಬಾಸ್ಕೊ ನಗರದಲ್ಲಿ ನಡೆದಿದೆ.
ಮೃತನನ್ನು ಚಿಂಚೋಳಿ ನಿವಾಸಿ ಗುರು(15) ಎಂದು ಗುರುತಿಸಲಾಗಿದೆ.
ಗುರು ಕಳೆದ ಮೂರು ದಿನಗಳಿಂದ ಶಾಲೆಯಿಂದ ನಾಪತ್ತೆಯಾಗಿದ್ದ. ಇಂದು ಆತನ ಶವ ಶಾಲಾ ಆವರಣದ ಬಾವಿಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ವಿವರ:
ಗುರು ಶಾಲೆಗೆ ಬೈಕ್ ತೆಗೆದುಕೊಂಡು ಹೋಗಿ ಗೋಡೆಗೆ ಢಿಕ್ಕಿ ಹೊಡೆದಿದ್ದ. ಈ ವೇಳೆ ಬೈಕ್‌ಗೆ ಹಾನಿಯಾಗಿದ್ದು ಸಿಬ್ಬಂದಿ ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಿದ್ದರು. ಪ್ರಾಂಶುಪಾಲರು ಗುರುವಿಗೆ ಬೈದು, ಬೈಕ್ ದುರಸ್ತಿ ವೆಚ್ಚವನ್ನು ಕುಟುಂಬಸ್ಥರಿಂದ ಭರಿಸುವಂತೆ ಹೇಳಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಭಯಗೊಂಡ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಹೇಳಲಾಗುತ್ತಿದೆ. ಪೊಲೀಸರ ತನಿಖೆಯ ಬಳಿಕವಷ್ಟೇ ಸತ್ಯ ಸಂಗತಿ ಏನು ಎಂಬುದು ತಿಳಿದು ಬರಬೇಕಾಗಿದೆ.
























