ಆಸ್ತಿ ಆಸೆಗೆ ಜನ್ಮದಾತನನ್ನೇ ಕೊಂದ ಪಾಪಿ ಪುತ್ರ

ಬೆಂಗಳೂರು: ಆಸ್ತಿ ಪಡೆಯುವ ಹುಚ್ಚಿಗೆ ಜನ್ಮ ಕೊಟ್ಟ ತಂದೆಯನ್ನೇ ಮಗನೊಬ್ಬ ಇರಿದು ಹತ್ಯೆ ಮಾಡಿರುವ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮುನಿಕೃಷ್ಣ(70) ಎಂಬವರೇ ‌ಮೃತ ದುರ್ದೈವಿ. ಕೊಲೆಗೈದ ಆರೋಪಿಯನ್ನು ಮೋಹನ್ ಕುಮಾರ್ ಎಂದು ಗುರುತಿಸಲಾಗಿದೆ.

ತಂದೆ ಮತ್ತು ಮಕ್ಕಳ ನಡುವೆ ಆಸ್ತಿಗಾಗಿ ಹಲವು ಬಾರಿ ಗಲಾಟೆ ನಡೆದಿತ್ತು ಎಂದು ತಿಳಿದು ಬಂದಿದೆ. ಆರೋಪಿ ಮೋಹನ್ ಕಳೆದ ಎರಡು ದಿನಗಳ ಹಿಂದೆ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ಮುನಿಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದು, ಹಲ್ಲೆ ಮಾಡಿದ ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.





















































 
 

ಮುನಿಕೃಷ್ಣ ಅವರು ಬಿಎಂಟಿಸಿ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದು, ಕೋಟ್ಯಾಂತರ ರೂ. ಆಸ್ತಿ ಮಾಡಿದ್ದರು. ಆಸ್ತಿಯನ್ನು ಮೊಮ್ಮಕ್ಕಳು ಹೆಸರಿಗೆ ವಿಲ್ ಮಾಡಿದ್ದು, ಆ ಬಳಿಕ ತಂದೆ ಮತ್ತು ಮಕ್ಕಳ ನಡುವೆ ಆಸ್ತಿ ಕಲಹ ಆರಂಭವಾಗಿತ್ತು ಎಂದು ತಿಳಿದು ಬಂದಿದೆ.

error: Content is protected !!
Scroll to Top