ಎಷ್ಟು ಹೊತ್ತಿಗೆ ಗ್ರಹಣ, ಎಲ್ಲೆಲ್ಲಿ ಗೋಚರ?
ನವದೆಹಲಿ: 2026ರ ಮೊದಲ ಸೂರ್ಯ ಗ್ರಹಣ ಮಂಗಳವಾರ (ಫೆ.17) ಗೋಚರವಾಗಲಿದೆ. ಇದನ್ನ ʻರಿಂಗ್ ಆಫ್ ಫೈರ್ʼ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಕಂಕಣ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ.
ಮಂಗಳವಾರ ಮಧ್ಯಾಹ್ನ 3.26ರ ವೇಳೆಗೆ ಗ್ರಹಣ ಪ್ರಾರಂಭವಾಗಿ ಸಂಜೆ 7.57ಕ್ಕೆ ಕೊನೆಗೊಳ್ಳಲಿದೆ. ಸಂಪೂರ್ಣ ಸೂರ್ಯಗ್ರಹಣದ ವೇಳೆ ಸೂರ್ಯನ ಕೇಂದ್ರದ 96%ರಷ್ಟನ್ನು ಚಂದ್ರ ಆವರಿಸಲಿದೆ. ಆದ್ರೆ ಈ ಗ್ರಹಣ ಭಾರತದಲ್ಲಿ ಗೋಚರ ಆಗುವುದಿಲ್ಲ.
ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕದ ಕೆಲವು ಭಾಗಗಳು, ಟಾಂಜಾನಿಯಾ, ಜಾಂಬಿಯಾ ಮತ್ತು ಜಿಂಬಾಬ್ವೆಯಂತಹ ದೇಶಗಳಲ್ಲಿ ಗೋಚರವಾಗಲಿದೆ.ಖಗೋಲ ಆಸಕ್ತರುವಿಶೇಷ ವೀಕ್ಷಣಾ ಸಾಧನಗಳನ್ನ ಬಳಸಿಕೊಂಡು ಗ್ರಹಣ ವೀಕ್ಷಿಸಬಹುದು.
ನಾಸಾ ಹೇಳುವಂತೆ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯಿಂದ ಅತ್ಯಂತ ದೂರದ ಬಿಂದುವಿನಲ್ಲಿ ಅಥವಾ ಹತ್ತಿರದಲ್ಲಿದ್ದಾಗ ಕಂಕಣ ಸೂರ್ಯ ಗ್ರಹಣ ಸಂಭವಿಸುತ್ತದೆ. ಚಂದ್ರನು ಆಕಾಶದಲ್ಲಿ ಸ್ವಲ್ಪ ಚಿಕ್ಕದಾಗಿ ಕಾಣಿಸಿಕೊಳ್ಳಲಿದ್ದಾನೆ, ಸೂರ್ಯನನ್ನು ಸಂಪೂರ್ಣವಾಗಿ ಆವರಿಸಲು ಸಾಧ್ಯವಿಲ್ಲ. ಹಾಗಾಗಿ ಸಂಪೂರ್ಣ ಕತ್ತಲಾಗುವ ಬದಲಿಗೆ ವೀಕ್ಷಕರು ಸೂರ್ಯನ ಮುಂದೆ ಬಂದ ಚಂದ್ರನ ಗಾಢ ವೃತ್ತಾಕಾರದ ಸಿಲೂಯೆಟ್ (ಚಂದ್ರನ ಸುತ್ತ ಬೆಳಕು ಇರುವ ಮಾದರಿ) ಅನ್ನು ವೀಕ್ಷಿಸುತ್ತಾರೆ. ಆಗ ಸೂರ್ಯನ ಬೆಳಕು ಉಂಗುರದ ಮಾದರಿಯಲ್ಲಿ ಗೋಚರಿಸುತ್ತದೆ. ಅದಕ್ಕಾಗಿ ʻರಿಂಗ್ ಆಫ್ ಫೈರ್ʼ ಎಂದು ಕರೆಯಲಾಗುತ್ತದೆ. ವಾರ್ಷಿಕ ಗ್ರಹಣದಲ್ಲಿ ಹಗಲು – ಬೆಳಕಿನ ಆಟ ನಡೆಯುತ್ತದೆ.
























