ವಂದೇ ಮಾತರಂ ಅನ್ನು ರಾಷ್ಟ್ರಗೀತೆಯಾಗಿಸುವ ಕೇಂದ್ರದ ಪ್ರಯತ್ನ ಸರಿಯಲ್ಲ: ಬಿ.ಕೆ. ಹರಿಪ್ರಸಾದ್

ಬೆಂಗಳೂರು: ವಂದೇ ಮಾತರಂ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿ ‌ಮಾಡುವ ಕೇಂದ್ರ ಸರ್ಕಾರದ ಪ್ರಯತ್ನ ಸರಿಯಲ್ಲ ಎಂದು MLC ಬಿ.ಕೆ. ಹರಿಪ್ರಸಾದ್ ಕಿಡಿ ಕಾರಿದ್ದಾರೆ.

ಭಾರತ ದೇಶದಲ್ಲಿ ವಿವಿಧ ಧರ್ಮದ ಜನರಿದ್ದಾರೆ. ಅವರೆಲ್ಲರಿಗೂ ಈ ಗೀತೆ ಸಮಾನ ಸ್ವೀಕಾರಾರ್ಹವಲ್ಲ. ರಾಷ್ಟ್ರ ಗೀತೆಯ ಗೌರವವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ವಂದೇ ಮಾತರಂ ಗೀತೆಗೆ ಅಧಿಕ ಪ್ರಶಾಸ್ತ್ಯ ನೀಡುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಗೀತೆಗೂ ಮೊದಲು ವಂದೇ ಮಾತರಂ‌ ಹಾಡುವುದು ಸಂಪ್ರದಾಯಕ್ಕೆ ವಿರುದ್ಧ. ಕೋಮು ರಾಜಕೀಯ ಉದ್ದೀಪನಕ್ಕೆ ಈ ವಿಷಯವನ್ನು ಬಳಕೆ ಮಾಡಲಾಗುತ್ತಿದೆ. ಸಾಂಸ್ಕೃತಿಕ ಸಂಗತಿಗಳನ್ನು ರಾಜಕೀಯ ಲಾಭ ಪಡೆಯಲು ಬಳಸುವುದು ಸೂಕ್ತವಲ್ಲ. ರಾಷ್ಟ್ರಗೀತೆಯ ಗೌರವ ಕಾಪಾಡುವುದು ಎಲ್ಲರ ಕರ್ತವ್ಯ ಎಂದು ತಿಳಿಸಿದ್ದಾರೆ.





















































 
 
error: Content is protected !!
Scroll to Top