ವಿದೇಶದಿಂದಲೇ ಯುವತಿಯರಿಗೆ ವಂಚನೆ : ಪತಿಯ ವಿರುದ್ಧ ದೂರು ನೀಡಿದ ಪತ್ನಿ

ಮದುವೆಯಾಗಿದ್ದರೂ ಬೇರೆ ಯುವತಿಯರಿಗೆ ಮೋಸ ಮಾಡುತ್ತಿದ್ದ ಬಜಪೆಯ ಯುವಕ

ಮಂಗಳೂರು : ಮ್ಯಾಟ್ರಿಮೋನಿ ಸೈಟ್‌ನಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಮದುವೆಯ ನಾಟಕವಾಡಿ ಹಣ ಪಡೆದು ವಂಚಿಸುತ್ತಿದ್ದ ಯುವಕ ಮತ್ತು ಅವನ ಸಹಾಯಕನ ಮುಖವಾಡ ಬಯಲಾದ ಬೆನ್ನಿಗೆ ಮಂಗಳೂರಿನಲ್ಲಿ ಇದೇ ಮಾದರಿಯ ಇನ್ನೊಂದು ಘಟನೆ ವರದಿಯಾಗಿದೆ. ವಿದೇಶದಲ್ಲೇ ಕುಳಿತು ಯುವತಿಯರಿಗೆ ಗಾಳ ಹಾಕುತ್ತಿದ್ದ ಮತ್ತೊಬ್ಬನ ವಂಚನೆ ಬಯಲಾಗಿದ್ದು, ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಯಲು ಮಾಡಿದ್ದಾರೆ. ಬಜಪೆ ನಿವಾಸಿ ಮನೀಶ್ ಎಂಬಾತನ ವಿರುದ್ಧ ಪತ್ನಿ ಪ್ರೀತಿ ಮಂಗಳೂರು ಮಹಿಳಾ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ.

ಸಂತ್ರಸ್ತೆ ಪ್ರೀತಿಗೆ ಫೇಸ್​​ಬುಕ್​​ನಲ್ಲಿ ಪರಿಚಯವಾಗಿದ್ದ ಮನೀಶ್​​, ಬ್ಲ್ಯಾಕ್​​ಮೇಲ್​​ ಮಾಡಿ ಆಕೆಯನ್ನು ಮದುವೆ ಆಗಿದ್ದ ಎಂದು ದೂರಲಾಗಿದೆ. ಮದುವೆಗೆ ಮೂರು ದಿನ ಇರುವಾಗ ಹಣ ಇಲ್ಲ ಎಂದು ಈತ ಆತ್ಮಹತ್ಯೆ ನಾಟಕವಾಡಿದ್ದ. ಹೀಗಾಗಿ ಮದುವೆಯ ಎಲ್ಲ ಖರ್ಚನ್ನು ತಾವೇ ಹಾಕಿ ಪ್ರೀತಿಯ ಪೋಷಕರು ವಿವಾಹ ಕಾರ್ಯ ನಡೆಸಿದ್ದರು. ಮದುವೆಯಾದ ಬಳಿಕ ಎರಡು ಲಕ್ಷ ಹಣ ಕೊಟ್ಟು ವಿದೇಶದಲ್ಲಿ ಮನೀಶ್​​ಗೆ ಕೆಲಸ ಕೊಡಿಸಲು ಕೂಡ ಪ್ರೀತಿ ಸಹಾಯ ಮಾಡಿದ್ದರು. ಆದರೆ ದುಬೈಗೆ ಹೋದ ಈತ ಬಹರೇನ್​​ನಲ್ಲಿರುವ ಮಹಿಳೆ ಜೊತೆ ಸಂಬಂಧ ಶುರು ಮಾಡಿದ್ದಾನೆ. ವಿಚಾರ ತಿಳಿದು ಈತನ ಇತಿಹಾಸವನ್ನು ಪ್ರೀತಿ ಕೆದಕಿದ್ದು, ಈ ವೇಳೆ ಮನೀಶ್​​ನ ನಿಜರೂಪ ಬಯಲಾಗಿದೆ.





















































 
 

ಪ್ರೀತಿ ಜೊತೆ ಮದುವೆಗೂ ಮುನ್ನ ಹಲವು ಯುವತಿಯರ ಜೊತೆ ಲವ್ ಅಫೇರ್​​ ಹೊಂದಿದ್ದ ಮನೀಶ್​​, ಅವರ ಬಳಿ ಕೂಡ ಹಣ ಪಡೆದು ಮೋಸ ಮಾಡಿದ್ದ. ಈ ವಿಚಾರವನ್ನು ಆ ಯುವತಿಯರೇ ಪ್ರೀತಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹಣ ವಾಪಾಸ್ ಕೇಳಿದರೆ ಎಲ್ಲ ಯುವತಿಯರ ಬಳಿ ಒಂದೇ ನಾಟಕ ಆಡಿದ್ದ ಆರೋಪಿ, ತನಗೆ ಬ್ರೈನ್​ ಟ್ಯೂಮರ್ ಇದೆ ಎಂದು ಹೇಳಿ ಹಣ ಕೊಡದೆ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದ. ಟಿಕ್‌ ಟಾಕ್ ಮಾಡಿ ಯುವತಿಯರಿಗೆ ಗಾಳ ಹಾಕುವ ಮನೀಶ್ ನಡತೆಯಿಂದ ಬೇಸತ್ತ ಪತ್ನಿ ಪ್ರೀತಿ, ಇಂತಹ ಗಂಡ ಬೇಡ. ಈತನ ನಂಬಿ ಮತ್ತೆ ಯಾರು ಮೋಸ ಹೋಗಬಾರದು ಎಂದು ಅಲವತ್ತುಕೊಂಡಿದ್ದಾರೆ.

error: Content is protected !!
Scroll to Top