ಬಿಸಿಯೂಟಕ್ಕಾಗಿ ನೂಕುನುಗ್ಗಲು: ಬೆರಳು ಕಳೆದುಕೊಂಡ ಬಾಲಕಿ

ತುಮಕೂರು: ಬಿಸಿಯೂಟ ಸೇವಿಸಲು ಸರತಿ‌ ಸಾಲಿನಲ್ಲಿ ನಿಂತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳ ನಡುವೆ ನೂಕುನುಗ್ಗಲು ಸಂಭವಿಸಿದ್ದು, ಇದರಿಂದಾಗಿ ಒಂದನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಕೈ ಬೆರಳುಗಳು ಕಬ್ಬಿಣದ ಬಾಗಿಲಿಗೆ ಸಿಲುಕಿ ತುಂಡಾದ ಘಟನೆ ಗೂಳೂರು ಸ.ಹಿ.ಪ್ರಾ. ಶಾಲೆಯಲ್ಲಿ ನಡೆದಿದೆ.

ವಿದ್ಯಾರ್ಥಿನಿ ಚಿನ್ಮಯಿದೇವಿ ಎಂಬ ಮಗು ಈ ಘಟನೆಯಲ್ಲಿ ತನ್ನ ಕೈಯ ಎರಡು ಬೆರಳುಗಳನ್ನು ಕಳೆದುಕೊಂಡಿದೆ. ತಳ್ಳಾಟ ನೂಕಾಟದ ನಡುವೆ ತಾನು ಬೀಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಬಾಲಕಿ ಕಬ್ಬಿಣದ ಬಾಗಿಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಈ ವೇಳೆ ಹಿಂದಿದ್ದ ವಿದ್ಯಾರ್ಥಿಗಳು ಬಾಗಿಲನ್ನು ನೂಕಿದ್ದು, ಬಾಗಿಲ ಸಂಧಿಗೆ ಸಿಲುಕಿ ಬಾಲಕಿಯ ಎರಡು ಬೆರಳುಗಳು ತುಂಡಾಗಿ ನೆಲಕ್ಕೆ ಬಿದ್ದಿವೆ.

ಇನ್ನು ಗಾಯಾಳು ವಿದ್ಯಾರ್ಥಿನಿಯ ಬೆರಳಿಗೆ ಶಿಕ್ಷಕರು ಬ್ಯಾಂಡೇಜ್ ಹಾಕಿದ್ದಾರೆ. ಆದರೆ ಬೇರೆ ವಿದ್ಯಾರ್ಥಿಗಳು ಆಕೆಯ ತುಂಡಾಗಿ ಬಿದ್ದಿರುವ ಬೆರಳುಗಳನ್ನು ನೋಡಿ ಗಾಬರಿಯಾಗದೇ ಇರಲಿ ಎಂದು ಆ ಬೆರಳುಗಳನ್ನು ಗುಡಿಸಿ ಎಸೆದಿದ್ದಾಗಿ ಆರೋಪ ಕೇಳಿ ಬಂದಿದೆ. ಸಮಯೋಚಿತ ಚಿಕಿತ್ಸೆ ದೊರೆಯದೆ ಬಾಲಕಿಗೆ ಶಾಶ್ವತ ಅಂಗವೈಕಲ್ಯ ಉಂಟಾಗಿರುವ ಸಾಧ್ಯತೆ ಇದ್ದು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





















































 
 

ಹಾಗೆಯೇ ಸಂಬಂಧಪಟ್ಟವರಿಗೆ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ, ದಲಿತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ದೂರಿ ಸಲ್ಲಿಸಲು ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.

error: Content is protected !!
Scroll to Top