ಸರಕಿನಂತೆ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಪ್ರಕರಣ : ಚಾಲಕರ ವಿರುದ್ಧ ಕೇಸ್‌ ದಾಖಲು

ಬಳೆಂಜ ಶಾಲೆಯ ಮಕ್ಕಳನ್ನು ಟಿಪ್ಪರ್‌, ಪಿಕಪ್‌ನಲ್ಲಿ ಪ್ರವಾಸಕ್ಕೆ ಕರೆದೊಯ್ದಿದ್ದ ಶಿಕ್ಷಕರು

ಬೆಳ್ತಂಗಡಿ: ಟಿಪ್ಪರ್‌ನಲ್ಲಿ ಶಾಲಾ ಮಕ್ಕಳನ್ನು ಸರಕು ಸಾಗಿಸುವ ವಾಹನಗಳಲ್ಲಿ ಅಧ್ಯಯನ ಪ್ರವಾಸಕ್ಕೆ ಕೊಂಡೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಶಿಕ್ಷಕರನ್ನು ಅಮಾನತುಗೊಳಿಸಿದ ಬಳಿಕ ಇದೀಗ ಟಿಪ್ಪರ್ ಹಾಗೂ ಪಿಕಪ್ ವಾಹನ ಚಾಲಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕಳೆದ ಗುರುವಾರ ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ಜೇನು ಕೃಷಿ ಅಧ್ಯಯನ ಪ್ರವಾಸಕ್ಕೆ ಶಾಲಾ ಮಕ್ಕಳನ್ನು ತೆರೆದ ಪಿಕಪ್ ಮತ್ತು ಟಿಪ್ಪರ್‌ನಲ್ಲಿ ಅಪಾಯಕಾರಿ ರೀತಿ ಕರೆದೊಯ್ಯಲಾಗಿತ್ತು. ಬಳೆಂಜ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕಿರಣ್ ಶಾಲಾ ಮಕ್ಕಳನ್ನು ಜೇನು ಕೃಷಿ ಅಧ್ಯಯನಕ್ಕೆಂದು ಸ್ಥಳೀಯ ನಾಲ್ಕೂರು ಬಳಿಯ ಅನಿಲ್ ಫಾರ್ಮ್‌ಗೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದರು.





















































 
 

ಸಣ್ಣ ಮಕ್ಕಳನ್ನು ತೆರೆದ ಟಿಪ್ಪರ್‌ನಲ್ಲಿ ಮಣ್ಣು ತುಂಬಿಸಿದ ರೀತಿ ಕರೆದೊಯ್ದದ್ದಕ್ಕೆ ಪೋಷಕರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಪ್ರಭಾರ ಮುಖ್ಯ ಶಿಕ್ಷಕ ಕಿರಣ್‌ ಅವರನ್ನು ಅಮಾನತು ಮಾಡಲಾಗಿತ್ತು. ಈಗ ಟಿಪ್ಪರ್ ಹಾಗೂ ಪಿಕಪ್ ವಾಹನ ಚಾಲಕರ ವಿರುದ್ಧ ಬಿಎನ್‌ಎಸ್ 281, 192(ಎ) ಅಡಿ ಬೆಳ್ತಂಗಡಿಯ ವೇಣೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

error: Content is protected !!
Scroll to Top