ಪುತ್ತೂರು: ಅಲ್ಪ ಕಾಲದ ಅಸೌಖ್ಯದಿಂದ ಯುವಕನೊಬ್ಬ ಮೃತಪಟ್ಚ ಘಟನೆ ನಡೆದಿದೆ.
ಏನೇಕಲ್ಲು ಗ್ರಾಮದ ಪದ್ಮಡ್ಕ ನಿವಾಸಿ ಸುಜಿತ್(27) ಎಂಬವರೇ ಮೃತ ದುರ್ದೈವಿ. ಇವರು ಅನಾರೋಗ್ಯದ ಹಿನ್ನೆಲೆ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರ ಅಂತ್ಯ ಸಂಸ್ಕಾರ ಅವರ ತಾಯಿಯ ತವರು ಮನೆಯಾದ ಕೂತ್ಕುಂಜದ ಚಿದ್ದಲ್ಲು ದಾಮೋದರ ಗೌಡ ಅವರ ಮನೆಯಲ್ಲಿ ನಡೆಯಿತು.
ಮೃತರು ತಾಯಿ, ಸಹೋದರರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
























