ಟಿ20 ವಿಶ್ವಕಪ್‌ : ನಮೀಬಿಯಾ ಎದುರು ಭಾರತಕ್ಕೆ 93 ರನ್‌ಗಳ ಭರ್ಜರಿ ಗೆಲುವು

ದುರ್ಬಲ ತಂಡವಾದರೂ ಬೌಲಿಂಗ್‌ನಲ್ಲಿ ಮಿಂಚಿದ ನಮೀಬಿಯಾ

ನವದೆಹಲಿ: ಭಾರತ ತಂಡ ಟಿ20 ವಿಶ್ವಕಪ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು ಸೋಲಿಸಿದ್ದ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ನಮೀಬಿಯಾವನ್ನು 93 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಆಲ್‌ರೌಂಡ್ ಪ್ರದರ್ಶನ ಮತ್ತು ಇಶಾನ್ ಕಿಶನ್ ಮತ್ತು ವರುಣ್ ಚಕ್ರವರ್ತಿ ಅವರ ಅದ್ಭುತ ಪ್ರದರ್ಶನ ದೆಹಲಿಯಲ್ಲಿ ನಡೆದ ಈ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲಲು ಸಹಾಯ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 209 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ನಮೀಬಿಯಾದ ಇನ್ನಿಂಗ್ಸ್ 19ನೇ ಓವರ್‌ನಲ್ಲಿ 116 ರನ್‌ಗಳಿಗೆ ಕೊನೆಗೊಂಡಿತು.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಭಾರತ 9 ವಿಕೆಟ್‌ ನಷ್ಟಕ್ಕೆ 209 ರನ್‌ ಗಳಿಸಿತ್ತು. 210 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ನಮೀಬಿಯಾ 18.2 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್‌ ಆಯ್ತು.





















































 
 

ಉತ್ತಮ ಆರಂಭ ಪಡೆದಿದ್ದ ನಮೀಬಿಯಾ 2 ವಿಕೆಟ್‌ ನಷ್ಟಕ್ಕೆ 86 ರನ್‌ ಗಳಿಸಿತ್ತು. ಆದರೆ ಮುಂದಿನ 8 ರನ್‌ ಗಳಿಸುಷ್ಟರಲ್ಲಿ 4 ಪ್ರಮುಖ ವಿಕೆಟ್‌ ಕಳೆದುಕೊಂಡಿತ್ತು. ಅಂತಿಮವಾಗಿ 116 ರನ್‌ಗಳಿಗೆ ಪತನಗೊಂಡಿತು.

ವರುಣ್‌ ಚಕ್ರವರ್ತಿ 3 ವಿಕೆಟ್‌, ಹಾರ್ದಿಕ್‌ ಪಾಂಡ್ಯ ಮತ್ತು ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌, ಆರ್ಶ್‌ದೀಪ್‌ ಸಿಂಗ್‌, ಶಿವಂ ದುಬೆ, ಬುಮ್ರಾ ತಲಾ ಒಂದೊಂದು ವಿಕೆಟ್‌ ಪಡೆದರು.

ಅಭಿಷೇಕ್‌ ಶರ್ಮಾ ಬದಲು ಬ್ಯಾಟಿಂಗ್‌ಗೆ ಇಳಿದ ಸಂಜು ಸ್ಯಾಮ್ಸನ್‌ ಮೂರು ಸಿಕ್ಸ್‌ ಸಿಡಿಸಿ 22 ರನ್‌ ಗಳಿಸಿ ಔಟಾದರು. ಸ್ಯಾಮ್ಸನ್‌ ಔಟಾದ ಬೆನ್ನಲ್ಲೇ ಇಶನ್‌ ಕಿಶನ್‌ ಸಿಕ್ಸರ್‌ ಬೌಂಡರಿಗಳ ಸುರಿಮಳೆ ಸುರಿಸಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಕಿಶನ್‌ 61 ರನ್‌ (24 ಎಸೆತ, 6 ಬೌಂಡರಿ, 5 ಸಿಕ್ಸ್) ಹೊಡೆದು ಔಟಾದರು. 20 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭಾರತದ ಪರ ಟಿ20 ವಿಶ್ವಕಪ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.

ತಿಲಕ್‌ ವರ್ಮಾ 25 ರನ್‌, ಶಿವಂ ದುಬೆ 23 ರನ್‌ ಹೊಡೆದರೆ ಹಾರ್ದಿಕ್‌ ಪಾಂಡ್ಯ 52 ರನ್‌ (28 ಎಸೆತ, 4 ಬೌಂಡರಿ, 4 ಸಿಕ್ಸ್‌) ಹೊಡೆದು ಔಟಾದರು. ಎರಡನೇ ವಿಕೆಟಿಗೆ ಇಶನ್‌ ಕಿಶನ್‌ ಮತ್ತು ತಿಲಕ್‌ ವರ್ಮಾ 31 ಎಸೆತಗಳಲ್ಲಿ 79 ರನ್‌, ಹಾರ್ದಿಕ್‌ ಪಾಂಡ್ಯ ಮತ್ತು ಶಿವಂ ದುಬೆ 5ನೇ ವಿಕೆಟಿಗೆ 39 ಎಸೆತಗಳಲ್ಲಿ 81 ರನ್‌ ಜೊತೆಯಾಟವಾಡಿದ್ದು ರನ್‌ ಏರಿಕೆಗೆ ಕಾರಣವಾಯಿತು.

ಸ್ಮಿತ್‌ ಎಸೆದ ಇನ್ನಿಂಗ್ಸ್‌ನ 6ನೇ ಓವರ್‌ನಲ್ಲಿ ಇಶನ್‌ ಕಿಶನ್‌ 4 ಸಿಕ್ಸ್‌, 1 ಬೌಂಡರಿ ಹೊಡೆಯುವ ಮೂಲಕ 28 ರನ್‌ ಚಚ್ಚಿದ್ದರು. ಭಾರತ ಮೊದಲ 10 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 120 ರನ್‌ ಚಚ್ಚಿದ್ದರೆ ಕೊನೆಯ 10 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 89 ರನ್‌ ಗಳಿಸಿತ್ತು.

error: Content is protected !!
Scroll to Top