ಶಾಸಕ ಅಶೋಕ್ ಕುಮಾರ್ ರೈ ಕೇಪು ಕೋಳಿ ಅಂಕ ನಡೆಸಿದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್

ಪುತ್ತೂರು: ಕೇಪು ಉಳ್ಳಾಲ್ತಿ ಅಮ್ಮನವರ ಜಾತ್ರಾ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರೇ‌ ಮುಂದೆ ನಿಂತು ಕೋಳಿ ಅಂಕ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಕೇಪು ಜಾತ್ರೆಯಲ್ಲಿ ಪ್ರತಿವರ್ಷವೂ ಮೂರು ದಿನಗಳ ಜೂಜು ರಹಿತ ಕೋಳಿ ಅಂಕ ನಡೆಯುತ್ತದೆ. ಆದರೆ ಈ ಬಾರಿ ಕೋಳಿ ಅಂಕ ನಡೆಸಲು ಅವಕಾಶ ಇಲ್ಲ ಎಂದು ಪೊಲೀಸರು ಅದನ್ನು ತಡೆದಿದ್ದರು. ಆದರೆ ಶಾಸಕ ಅಶೋಕ್ ಕುಮಾರ್ ರೈ ಅವರು ಸ್ಥಳಕ್ಕೆ ಬಂದು, ಅಲ್ಲೇ ನಿಂತು ಕೋಳಿ ಅಂಕ ನಡೆಸಿದ್ದರು. ಈ ಪ್ರಕರಣದಲ್ಲಿ ಶಾಸಕರೂ ‌ಸೇರಿದಂತೆ ಸುಮಾರು 20 ಜನರ ಮೇಲೆ ವಿಟ್ಲ ಪೊಲೀಸರು ಕೇಸು ದಾಖಲಿಸಿದ್ದರು.

ಈ‌ ಸಂಬಂಧ ಶಾಸಕರು ಹೈಕೋರ್ಟ್ ಮೊರೆ ಹೋಗಿದ್ದರು. ಶಾಸಕರ ‌ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಕೋರ್ಟ್ ಈ ಹಿಂದೆ ಸೂಚಿಸಿತ್ತು‌. ಈಗ ಇದೇ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.





















































 
 

ಶಾಸಕರ ಪರ ವಕೀಲ ಅರುಣ್ ಶ್ಯಾಮ್ ಹಾಗು ಸುಯೋಗ್ ಅವರು ವಾದ ಮಂಡನೆ ಮಾಡಿದ್ದರು.

error: Content is protected !!
Scroll to Top