ಪುತ್ತೂರು: ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಫೆ. 14 ರಿಂದ ಫೆ. 22 ರ ವರೆಗೆ ‘ಓಲ್ಡ್ ಗೋಲ್ಡ್ ಎಕ್ಸ್ಚೇಂಜ್ ಮೇಳ’ವನ್ನು ಆಯೋಜನೆ ಮಾಡಲಾಗಿದೆ.
ಹಳೆಯ ಚಿನ್ನಾಭರಣಗಳನ್ನು ಹೊಸ ವಿನ್ಯಾಸದ ಚಿನ್ನಾಭರಣಗಳ ಜೊತೆಗೆ ಬದಲಾವಣೆ ಮಾಡಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.
ಗ್ರಾಹಕರು ನೀಡುವ ಹಳೆಯ ಚಿನ್ನಾಭರಣಗಳನ್ನು ತಕ್ಷಣವೇ ಪರಿಶೀಲನೆ ಮಾಡಿ ಈಗಿರುವ ಮಾರುಕಟ್ಟೆ ದರದ ಅನ್ವಯ ಯಾವುದೇ ಕಡಿತ ಇಲ್ಲದೆ ಈ ವಿನಿಮಯ ಸೌಲಭ್ಯವನ್ನು ಸಂಸ್ಥೆ ಒದಗಿಸುತ್ತಿದೆ. ಜೊತೆಗೆ ಪ್ರತೀ ಗ್ರಾಂಗೆ ರೂ. 200 ಲಾಭವನ್ನು ಪಡೆಯುವ ಅವಕಾಶ ಸಹ ಈ ವೇಳೆ ಸಂಸ್ಥೆ ಒದಗಿಸುತ್ತಿದೆ.
ಈ ಆಫರ್ ಪುತ್ತೂರು ಮಾತ್ರವಲ್ಲದೆ ಸುಳ್ಯ, ಕುಶಾಲನಗರ, ಮೂಡಬಿದ್ರೆ, ಹಾಸನದಲ್ಲಿರುವ ಮಳಿಗೆಗಳಲ್ಲೂ ಲಭ್ಯ ಎಂದು ಸಂಸ್ಥೆ ತಿಳಿಸಿದೆ.
























