ಫೆ. 12 – 21: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ, ದೈವಗಳ ‌ನೇಮ

ಈಶ್ವರಮಂಗಲ: ಇಲ್ಲಿನ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಮತ್ತು ಕಿನ್ನಿಮಾಣಿ, ಪೂಮಾಣಿ ಮತ್ತು ಪಿಲಿ ಚಾಮುಂಡಿ ದೈವಗಳ ‌ನೇಮ ಫೆ. 12 ರಿಂದ ಫೆ. 21 ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ನಡೆಯಲಿದೆ.

ಫೆ. 12 ರಿಂದ 20 ರ ವರೆಗೆ ದೇವಾಲಯದಲ್ಲಿ ಜಾತ್ರೆ ಮತ್ತು ಫೆ. 21 ರಂದು ಮಾಡದ ಗುಡ್ಡೆಯಲ್ಲಿ ದೈವಗಳ ನೇಮ ನಡೆಯಲಿದೆ.

ಜಾತ್ರಾ ಪ್ರಯುಕ್ತ ಫೆ. 12 ರಂದು ಹಸಿರುವಾಣಿ ಹೊರೆಕಾಣಿಕೆ ‌ಸಮರ್ಪಣೆಯಾಗಲಿದ್ದು, ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಉದ್ಘಾಟನೆ ಮಾಡಲಿದ್ದಾರೆ. ಉಗ್ರಾಣ ತುಂಬುವುದು, ದುರ್ಗಾ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯಲಿವೆ.





















































 
 

ಫೆ.13 ರಂದು ಗಣಪತಿ ಹೋಮ, ಧ್ವಜಾರೋಹಣ, ಬಲಿವಾಡು ಕೂಟ, ಸಾಂಸ್ಕೃತಿಕ ಕಾರ್ಯಕ್ರಮ, ಅತಿಕಾಯ ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ, ಮಹಾಪೂಜೆ, ದೇವರ ನಿತ್ಯಬಲಿ, ನಿತ್ಯಬಲಿ, ವಿಶೇಷ ಧರ್ಮ ಜಾಗೃತಿ ಕಾರ್ಯಕ್ರಮ, ನಂಬಿಕೆದಾಯೆ ಎಂಬ ಸಾಮಾಜಿಕ ಹಾಗೂ ಹಾಸ್ಯ ನಾಟಕ, ಅನ್ನಸಂತರ್ಪಣೆ ನಡೆಯಲಿದೆ. ಫೆ.14 ರಂದು ನಿತ್ಯ ಬಲಿ, ಮೂಲಸ್ಥಾನ ಮೆಣಸಿನಕಾನದಲ್ಲಿ ತಂತ್ರಿವರ್ಯರಿಂದ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಊರುದ ಮಾರಿ ಎಂಬ ವಿಭಿನ್ನ ಶೈಲಿಯ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಫೆ.15 ರಂದು ನಿತ್ಯ ಬಲಿ, ಏಕದಶ ರುದ್ರಾಭಿಶೇಕ, ಮಹಾಪೂಜೆ, ಪ್ರಸಾದ ವಿತರಣೆ, ಅರ್ಧ ಏಕಾಹ ಭಜನೆ ಪ್ರಾರಂಭ, ಉತ್ಸವ ಬಲಿ, ಮಹಾಶಿವರಾತ್ರಿ ಮಹೋತ್ಸವ ನಡೆಯಲಿದೆ. ಫೆ.16 ರಂದು ಉತ್ಸವ ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಭಜನಾ ಸಂಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮ, ಚಕ್ರವ್ಯೂಹ, ಬಬ್ರುವಾಹನ ಮತ್ತು ತಾರಕಾಸುರ ಯಕ್ಷಗಾನ ಬಯಲಾಟ ನಡೆಯಲಿದೆ.

ಫೆ.17 ರಂದು ಉತ್ಸವ ಬಲಿ, ಮಹಾಪೂಜೆ, ನಡುದೀಪೋತ್ಸವ, ಧಾರ್ಮಿಕ ಸಭೆ, ವಿಭಿನ್ನ ಶೈಲಿಯ ಶಿವಧೂತೆ ಗುಳಿಗೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಫೆ.18 ರಂದು ಮಹಾದರ್ಶನಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ಕುತ್ಯಾಳ ಶ್ರೀ ಮಹಾವಿಷ್ಣು ದೇವರ ಸನ್ನಿಧಿಗೆ ಶ್ರೀ ದೇವರ ಸವಾರಿ, ಕಟ್ಟೆಪೂಜೆ, ಶಯನೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ಗಜೇಂದ್ರ ಮೋಕ್ಷ ಯಕ್ಷಗಾನ ಬಯಲಾಟ ನಡೆಯಲಿದೆ.

ಫೆ.19 ರಂದು ಕವಾಟೋದ್ಘಾಟನೆ, ಸೀಯಾಳ ಅಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಕಲ್ಯಾಣತ್ರಯ ಯಕ್ಷಗಾನ ಬಯಲಾಟ, ಉತ್ಸವ ಬಲಿ, ಅವಭೃತ ಸ್ನಾನಕ್ಕೆ ಶ್ರೀದೇವರ ಸವಾರಿ, ಕಟ್ಟೆಪೂಜೆ, ಅವಭೃತ ಸ್ನಾನ ನಡೆಯಲಿದೆ.

ಫೆ.20 ರಂದು ಬೆಡಿ ಸೇವೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ, ಮಂತ್ರಾಕ್ಷತೆ, ಸಂಪ್ರೋಕ್ಷಣೆ, ಮಹಾಪೂಜೆ, ರಾತ್ರಿ 8 ರಿಂದ ಶ್ರೀ ಕ್ಷೇತ್ರದ ದೈವಗಳ ಸ್ಥಾನದಿಂದ ಭಂಡಾರ ಹೊರಟು ಮಾಡದಗುಡ್ಡೆ ದೈವಗಳ ಚಾವಡಿಯಲ್ಲಿ ಏರಲಿದೆ.

ಫೆ.21 ರಂದು ಕಿನ್ನಿಮಾಣಿ, ಪೂಮಾಣಿ, ಪಿಲಿಚಾಮುಂಡಿ ದೈವಗಳ ನೇಮ ನಡೆಯಲಿದೆ. ಬಳಿಕ ಗುಳಿಗ ಕೋಲ ನಡೆಯಲಿದೆ.

ಶಿವರಾತ್ರಿಯಂದು ರಾತ್ರಿಯ ಸಮಯದಲ್ಲಿ ಹೊರತುಪಡಿಸಿ ಜಾತ್ರೆಯ ಎಲ್ಲಾ ದಿನಗಳಲ್ಲಿಯೂ ‌ಶ್ರೀ ಕ್ಷೇತ್ರದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.

error: Content is protected !!
Scroll to Top