ಅನ್ಯಕೋಮಿನ ಯುವಕನ ಜೊತೆ ವಿದ್ಯಾರ್ಥಿನಿ ಪರಾರಿ : ಪೋಷಕರಿಂದ ದೂರು

ವಯನಾಡಿಗೆ ಹೋಗಿ ರಿಜಿಸ್ಟ್ರರ್‌ ಮದುವೆಯಾದ ಮಾಹಿತಿ

ಮಂಗಳೂರು : ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿಯಾಗಿರುವ ಘಟನೆ ಮಂಗಳೂರಿನ ಸುರತ್ಕಲ್​​ನಲ್ಲಿ ನಡೆದಿದೆ. ಸುರತ್ಕಲ್​ನ ಮುಕ್ಕ ಕಾಲೇಜಿನಲ್ಲಿ ಓದುತ್ತಿದ್ದ ಕಾಸರಗೋಡು ಆರ್.ಡಿ‌.ನಗರದ ಮೀಪುಗುರಿ ನಿವಾಸಿಯಾದ ವೈಶಾಲಿ ಪರಾರಿಯಾಗಿದ್ದು, ಜನವರಿ 31ರಂದು ಮಿದ್ಲಾಜ್ ಜತೆ ರಿಜಿಸ್ಟ್ರರ್​ ಮದುವೆ ಆಗಿರುವ ಮಾಹಿತಿ ತಿಳಿದುಬಂದಿದೆ. ಮಗಳು ಸಂಪರ್ಕಕ್ಕೆ ಸಿಗದಿದ್ದರಿಂದ ಕಂಗಾಲಾಗಿರುವ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮನೆಯವರೆಗೆ ತಿಳಿಸದೆ ಜನವರಿ 31ರಂದು ಕೇರಳದ ವಯನಾಡು ನೋಂದಣಾಧಿಕಾರಿ ಕಚೇರಿಯಲ್ಲಿ ವೈಶಾಲಿ ಹಾಗೂ ಮಿದ್ಲಾಜ್ ರಿಜಿಸ್ಟ್ರರ್ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ ವಿಷಯ ತಿಳಿದ ಪೋಷಕರು, ಆಕೆ ಇದ್ದ ಪಿಜಿಗೆ ಬಂದು ವಿಚಾರಿಸಿದ್ದು, ಫೆಬ್ರವರಿ‌ 9ರಂದು ಪಿಜಿಯಿಂದ ತೆರಳಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಆಕೆ ಎಲ್ಲಿ ಹೋಗಿದ್ದಾಳೆ ಎನ್ನುವುದು ಗೊತ್ತಾಗಿಲ್ಲ. ಇದರಿಂದ ಭಯಗೊಂಡ ವೈಶಾಲಿ ಪೋಷಕರು, ನೀಡಿದ ದೂರಿನ ಮೇರೆಗೆ ಸುರತ್ಕಲ್ ಠಾಣೆಯಲ್ಲಿ ಎಫ್​​ಐಆರ್​​ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.





















































 
 
error: Content is protected !!
Scroll to Top