ನಾಳೆ ದೇಶವ್ಯಾಪಿ ಬ್ಯಾಂಕ್‌ ಮುಷ್ಕರ : ಸೇವೆ ವ್ಯತ್ಯಯವಾಗುವ ಸಾಧ್ಯತೆ

ಖಾಸಗೀಕರಣ, ಕಾರ್ಮಿಕ ಸಂಹಿತೆ ವಿರೋಧಿಸಿ ಮುಷ್ಕರ

ನವದೆಹಲಿ : ಬ್ಯಾಂಕ್​ಗಳ ಖಾಸಗೀಕರಣ ಮತ್ತು ಕಾರ್ಮಿಕ ಸಂಹಿತೆಯನ್ನು ವಿರೋಧಿಸಿ ಫೆಬ್ರವರಿ 12ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಯಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ದೇಶದ ಪ್ರಮುಖ ಬ್ಯಾಂಕುಗಳು ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಭಾಗಿಯಾಗಲಿವೆ. ಸೇವೆಗಳ ಮೇಲೆ ಪರಿಣಾಮ ಬೀರಬಹುದು ಮತ್ತು ಯಾವುದೇ ತುರ್ತು ಬೇಕಿಂಗ್ ಕೆಲಸವನ್ನು ಮುಂಚಿತವಾಗಿ ಪೂರ್ಣಗೊಳಿಸಬೇಕೆಂದು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಸೂಚನೆ ನೀಡಿವೆ.

ಹಿಂದೂ ಮಜ್ದೂರ್ ಕಿಸಾನ್ ಪಂಚಾಯತ್​ನ ಪ್ರಾಂತೀಯ ನಾಯಕ ಮೊಹಮ್ಮದ್ ಹಸ್ನೈನ್ ಅನ್ಸಾರಿ, ಉತ್ತರ ಪ್ರದೇಶ ಕಿಸಾನ್​​ನ ಇಂದ್ರದೇವ್ ಪಾಲ್ ಇಡೀ ಭಾರತದಲ್ಲಿ ಮುಷ್ಕರ ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ಸಮಯದಲ್ಲಿ ಬ್ಯಾಂಕ್​ಗಳು, ಭಾರತೀಯ ಜೀವ ವಿಮಾ ನಿಗಮ, ಅಂಚೆ ಕಚೇರಿಗಳು ಮುಚ್ಚಲ್ಪಡುತ್ತವೆ. ಮಂಗಳವಾರ ಬ್ಯಾಂಕ್ ಹಾಗೂ ಎಲ್​ಐಸಿ ಉದ್ಯೋಗಿಗಳನ್ನು ಸಂಪರ್ಕಿಸಲಾಗಿದೆ ಎಂದು ಹೇಳಿದ್ದಾರೆ.





















































 
 

ಶಾಖೆಗಳು ತೆರೆದಿರಬಹುದು ಆದರೆ ನಗದು ವಹಿವಾಟು ಮತ್ತು ಚೆಕ್ ಕ್ಲಿಯರಿಂಗ್ ಕೆಲಸದಲ್ಲಿ ವಿಳಂಬವಾಗಬಹುದು. ಆದಾಗ್ಯೂ, ಡಿಜಿಟಲ್ ಬ್ಯಾಂಕಿಂಗ್ ಸೇವೆಗಳಲ್ಲಿ ಯಾವುದೇ ಅಡ್ಡಿ ಉಂಟಾಗುವುದಿಲ್ಲ.

ವಾರದಲ್ಲಿ ಕೇವಲ ಐದು ದಿನಗಳ ಕೆಲಸಕ್ಕೆ ಒತ್ತಾಯಿಸಿ ಜನವರಿ 27ರಂದು ಬ್ಯಾಂಕ್​ ನೌಕರರು ಒಂದು ದಿನದ ಮುಷ್ಕರವನ್ನು ನಡೆಸಿದ್ದರು. ಕಳೆದ ವರ್ಷದ ಕೊನೆಯಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿದ ನಾಲ್ಕು ಹೊಸ ಕಾರ್ಮಿಕ ಕಾನೂನುಗಳನ್ನು ವಿರೋಧಿಸಲು ಫೆಬ್ರವರಿ 12ರಂದು 10 ಕೇಂದ್ರ ಕಾರ್ಮಿಕ ಸಂಘಗಳು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿವೆ.

ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಹಾಳು ಮಾಡುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಇದಲ್ಲದೆ ಬ್ಯಾಂಕ್ ನೌಕರರ ಮೇಲೆ ಹೆಚ್ಚಿನ ಹೊರೆ ಹಾಕಲಾಗುತ್ತಿದೆ. ಹಳೆಯ ಪಿಂಚಣಿ ಮತ್ತು ಹೊಸ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುವ ಬೇಡಿಕೆಗಳು ಬಹಳ ದಿನಗಳಿಂದ ಕೇಳಿಬರುತ್ತಿವೆ. ಆದರೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂಬುದು ನೌಕರರ ವಾದ.

ದೇಶಾದ್ಯಂತ ಪ್ರಮುಖ ಬ್ಯಾಂಕ್ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿವೆ, ಇದರಿಂದಾಗಿ ಆ ದಿನದಂದು ಬ್ಯಾಂಕಿಂಗ್ ಸೇವೆಯಲ್ಲಿ ಗ್ರಾಹಕರಿಗೆ ಸಮಸ್ಯೆ ಉಂಟಾಗಬಹುದು. ಆದಾಗ್ಯೂ, ಬ್ಯಾಂಕುಗಳು ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಫೆಬ್ರವರಿ 12 ಅನ್ನು ಬ್ಯಾಂಕ್ ರಜಾದಿನವೆಂದು ಘೋಷಿಸಿಲ್ಲ, ಇದು ಶಾಖೆಗಳು ತೆರೆದಿರಲಿವೆ.

error: Content is protected !!
Scroll to Top