ಯಾದಗಿರಿ: ಮದ್ಯ ಸೇವನೆ ನಿಲ್ಲಿಸುವಂತೆ ಬೇಡಿಕೊಂಡ ಪುತ್ತಿಯನ್ನೇ ನಿರ್ದಯವಾಗಿ ಹೆತ್ತಮ್ಮನೇ ಕೊಂದು ಹಾಕಿದ ಘಟನೆ ರಾಜೀವ್ ನಗರದಲ್ಲಿ ನಡೆದಿದೆ.
ಪ್ರತಿಭಾ (11) ಮೃತ ದುರ್ದೈವಿ. ಆರೋಪಿ ಕ್ರೂರಿ ತಾಯಿಯನ್ನು ನಿರ್ಮಲಾ ಎಂದು ಗುರುತಿಸಲಾಗಿದೆ.
ನಿರ್ಮಲಾಳಿಗೆ ಕುಡಿತದ ಚಟ ಇದ್ದು, ಅದನ್ನು ಬಿಟ್ಟುಬಿಡುವಂತೆ ಪುಟ್ಟ ಮಗು ಅಮ್ಮನಿಗೆ ಹೇಳಿದ್ದಳು. ಇದರಿಂದ ಕೋಪಗೊಂಡ ನಿರ್ಮಲಾ ಅವಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ಆಕೆ ಜ್ಯೂಸ್ ಕುಡಿಯಲು ಹಣ ಕೇಳಿದಾಗ ನೀಡದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕಥೆ ಕಟ್ಟಿದ್ದಾಳೆ.
























