ಕಬಕ: ಕೊಡಿಪ್ಪಾಡಿ ಹಾಗೂ ಕುಳ ಗ್ರಾಮದಲ್ಲಿರುವ ವಾಸುಕಿ ಸ್ಪೋರ್ಟ್ಸ್ ಕ್ಲಬ್ (ರಿ) ಟ್ರಸ್ಟ್ ಓಜಾಲ , ಇದರ ಸದಸ್ಯರಿಂದ ಕಬಕ-ಕುಂಡಡ್ಕ ಸಂಪರ್ಕ ರಸ್ತೆಯ ಗುಂಡಿ ಹಾಗೂ ಬದಿಗಳಿಗೆ ಮಣ್ಣು ಹಾಕುವ ಮೂಲಕ ಊರಿನ ವಾಹನ ಸವಾರರಿಗೆ ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ಸಹಾಯಕವಾಗುವಂತೆ ಉತ್ತಮ ಕಾರ್ಯವನ್ನು ನಡೆಸಿದ್ದಾರೆ.
ವಾಸುಕಿ ಸ್ಪೋರ್ಟ್ಸ್ ಕ್ಲಬ್ (ರಿ) ಟ್ರಸ್ಟ್ ಓಜಾಲ ಇದರ ಅಧ್ಯಕ್ಷ ಮಿಥುನ್ ಓಜಾಲ, ಉಪಾಧ್ಯಕ್ಷ ಕಿರಣ್ ಓಜಾಲ, ಮಾಜಿ ಅಧ್ಯಕ್ಷ ಮುರಳೀಧರ ಕೊರ್ಜೆ ಹಾಗೂ ಎಲ್ಲಾ ಸದಸ್ಯರ ಸಹಕಾರದಿಂದ ಈ ಕಾರ್ಯ ನಡೆದಿದೆ.
























