ವಿವಾಹಿತನ ಜೊತೆ ಮಗಳ ಪ್ರೇಮ: ಮರ್ಯಾದೆಗಂಜಿ ‌ಸಾವಿಗೆ ಶರಣಾದ ತಾಯಿ ಮತ್ತು ಮಗಳು

ಮಂಡ್ಯ: ವಿವಾಹವಾದ ಪುರುಷನ ಜೊತೆಗೆ ಮಗಳ ಪ್ರೇಮ ಸಂಬಂಧದ ಕಾರಣಕ್ಕೆ ಮರ್ಯಾದೆಗೆ ಹೆದರಿ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಕುಂತಲಾದೇವಿ (46) ಮತ್ತು ಅವರ ಪುತ್ರಿ ಪ್ರಿಯಾಂಕ(19) ಮೃತಪಟ್ಟವರು.

ಪ್ರಿಯಾಂಕ ತನ್ನದೇ ಗ್ರಾಮದ 34 ವರ್ಷದ ಮುತ್ತು ರಾಜ್ ಎಂಬವನ ಜೊತೆ ಪ್ರೇಮ ಸಂಬಂಧ ಇಟ್ಟುಕೊಂಡಿದ್ದಳು. ಆದರೆ ಆತನಿಗೆ ಮದುವೆಯಾಗಿ ಇಬ್ಬರು ಮಕ್ಕಳು ಸಹ ಇದ್ದರು. ಆದರೂ ಪ್ರಿಯಾಂಕಳನ್ನು ಪ್ರೀತಿಸುವ‌ ನಾಟಕವಾಡುತ್ತಿದ್ದ. ನಿತ್ಯವೂ ಇವರ ಮನೆಗೆ ಬರುತ್ತಿದ್ದ ಮುತ್ತು ರಾಜ್ ಜೊತೆ ಮಗಳಿಗೆ ಅಕ್ರಮ ಸಂಬಂಧ ಇರುವ ಸಂಗತಿ ಇತ್ತೀಚೆಗಷ್ಟೇ ಮನೆಯವರ ಗಮನಕ್ಕೆ ಬಂದಿದೆ.





















































 
 

ಹೀಗಿದ್ದರೂ ಆಕೆಗೆ ಬೇರೆ ಕಡೆ ಸಂಬಂಧ ನೋಡಿ ಮದುವೆ ಮಾಡುವ ಪ್ರಯತ್ನದಲ್ಲಿ ಆಕೆಯ ಪೋಷಕರಿದ್ದರು. ಆದರೆ ತಾಯಿ ಶಕುಂತಲಾಗೆ ಮಗಳು ವಿವಾಹಿತನ ಜೊತೆಗೆ ಇಟ್ಟುಕೊಂಡಿದ್ದ ಅಕ್ರಮ ಸಂಬಂಧ ತೀವ್ರ ಆಘಾತ‌ ನೀಡಿತ್ತು. ಬುದ್ಧಿ ಹೇಳಿದರೂ ಮಗಳು ಕೇಳದೇ ಇದ್ದಾಗ ಮತ್ತು ಮುತ್ತುರಾಜ್‌ನ ಪೀಡನೆ ಹೆಚ್ಚಾದಾಗ ಮರ್ಯಾದೆಗೆ ಅಂಜಿ ತಾಯಿ ಮತ್ತು ಮಗಳು ಆತ್ಮಹತ್ಯೆಯ ದಾರಿ ಹಿಡಿದಿದ್ದಾಗಿ ತಿಳಿದು ಬಂದಿದೆ.

error: Content is protected !!
Scroll to Top