ಇಸ್ಲಾಮಾಬಾದ್‌ ಮಸೀದಿ ಬಾಂಬ್‌ ಸ್ಫೋಟಕ್ಕೆ 200ಕ್ಕೂ ಅಧಿಕ ಮಂದಿ ಬಲಿ

ಇದು ತನ್ನದೇ ಕೃತ್ಯ ಎಂದು ಹೇಳಿಕೊಂಡ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ

ಇಸ್ಲಾಮಾಬಾದ್‌: ಇಲ್ಲಿನ ಶಿಯಾ ಮಸೀದಿಯಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಭೀಕರ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರು 36 ಮಂದಿ ಅಲ್ಲ ಬದಲಾಗಿ 200ಕ್ಕಿಂತಲೂ ಅಧಿಕ ಎಂದು ವರದಿಯಾಗಿದೆ. ಈ ಸ್ಫೋಟದ ಹೊಣೆಯನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ.

ಈ ಸ್ಫೋಟದ ಬಗ್ಗೆ ಇಸ್ಲಾಮಿಕ್‌ ಸ್ಟೇಟ್‌ ಮುಖವಾಣಿ ಅಮಾಕ್ ಮೂಲಕ ಹೇಳಿಕೆ ನೀಡಿದ್ದು, ಈ ದಾಳಿಯು ಪಾಕಿಸ್ತಾನ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಸೈನಿಕ ನಡೆಸಿದ ಫಿದಾಯೀನ್ ಕಾರ್ಯಾಚರಣೆಯಾಗಿದೆ ಎಂದು ಹೇಳಿಕೊಂಡಿದೆ.





















































 
 

ಇಸ್ಲಾಮಿಕ್ ಸ್ಟೇಟ್ ತನ್ನ ಇತ್ತೀಚಿನ ಅಲ್-ನಬಾ ಸಂಚಿಕೆಯಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಸದಸ್ಯರು ಖೊರಾಸನ್ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಸೇರಲು ಕರೆ ನೀಡಿದೆ.

ಶುಕ್ರವಾರದ ಮಧ್ಯಾಹ್ನ ಪ್ರಾರ್ಥನೆ ನಡೆಯುತ್ತಿದ್ದಾಗ ಇಸ್ಲಾಮಾಬಾದ್‌ ಮಸೀದಿಯಲ್ಲಿ ನಡೆದ ಸ್ಫೋಟದಲ್ಲಿ 36 ಮಂದಿ ಸಾವನ್ನಪ್ಪಿದ್ದಾರೆ ಎಂದು ಪಾಕ್‌ ಸರ್ಕಾರ ಹೇಳಿಕೊಂಡಿತ್ತು. ಆದರೆ ಅಮಾಕ್ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದೆ.

ಸೈಫುಲ್ಲಾ ಅನ್ಸಾರಿ ಆತ್ಮಾಹುತಿ ಬಾಂಬರ್ ಆಗಿದ್ದು ಆತನ ಫೋಟೋವನ್ನು ಅಮಾಕ್ ಪ್ರಕಟಿಸಿದೆ. ತನ್ನ ಹೇಳಿಕೆಯಲ್ಲಿ ನೂರಾರು ಪಾಕಿಸ್ತಾನಿ ಶಿಯಾಗಳು ಸಿರಿಯಾದಲ್ಲಿ ಇರಾನ್ ಪರ ‘ಜೈನಬಿಯೂನ್ ಬ್ರಿಗೇಡ್’ ಸೇರಿದ್ದಾರೆ ಎಂದು ಉಲ್ಲೇಖಿಸಿದೆ.

error: Content is protected !!
Scroll to Top