ಗೇರುಕಟ್ಟೆ ಶ್ರೀ ಪತಂಜಲಿ ಯೋಗ ಶಿಬಿರದ ಪ್ರಥಮ ವಾರ್ಷಿಕೋತ್ಸವ

ಪುತ್ತೂರು: ಕಳಿಯ ಗೇರುಕಟ್ಟೆಯ ಕ್ಷೀರ ಸಂಗಮ ಸಭಾಭವನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕೇಂದ್ರ ಕಚೇರಿ ತುಮಕೂರು ಮಂಗಳೂರು ವಲಯ ಪುತ್ತೂರು ತಾಲೂಕು ಇದರ ವತಿಯಿಂದ ನಡೆಯುತ್ತಿರುವ ಯೋಗ ತರಬೇತಿ ಶಾಖೆಯಲ್ಲಿ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಜರಗಿತು.

ಮುಖ್ಯ ಶಿಕ್ಷಕಿ ಪ್ರೇಮಲತ ಗಣೇಶ್ ನಿತ್ಯ ಯೋಗ ಅಭ್ಯಾಸ ಮತ್ತು ಅಗ್ನಿಹೋತ್ರ ಕಾರ್ಯಕ್ರಮ ನಡೆಸಿಕೊಟ್ಟರು.

ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಭಾರತಿ ಎಂ. ಎಲ್. ಅಗ್ನಿಹೋತ್ರದ ನೇತೃತ್ವ ವಹಿಸಿದ್ದರು.





















































 
 

ಯೋಗ ಬಂಧುಗಳಾದ ಅಶೋಕ, ನಿತಿನ್, ವಸಂತ, ವಿಜಯ, ಶಿವಣ್ಣ, ಕೇಶವ, ಗಣೇಶ, ಸುಕೇಶ್, ಸತೀಶ, ವಿಖ್ಯಾತ, ಜಗದೀಶ, ಪದ್ಮಲತ, ಅರುಣ ಭಾಗವಹಿಸಿ ಯೋಗ ಜೀವನದ ಅನುಭವಗಳನ್ನು ಹಂಚಿಕೊಂಡರು.

ಯೋಗ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯ ಯೋಗ ಬಂಧುಗಳು ನಿತ್ಯವೂ ಭಾಗವಹಿಸಿ ಶಾಖೆಯನ್ನು ನಿರಂತರವಾಗಿ ನಡೆಯುವಂತೆ ಮಾಡಲು ಮುಖ್ಯ ಶಿಕ್ಷಕರು ಮಾರ್ಗದರ್ಶನ ನೀಡಿದರು. ಕಳೆದೊಂದು ವರ್ಷದಲ್ಲಿ ಯೋಗ ಕೇಂದ್ರವನ್ನು ನಡೆಸಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಹಶಿಕ್ಷಕ ಸುಕೇಶ್ ಸ್ವಾಗತಿಸಿ ಸತೀಶ್ ಭಂಡಾರಿ ನಾಳ ವಂದಿಸಿದರು. ಸಂಚಾಲಕರು ಮತ್ತು ವರದಿ ಪ್ರಮುಖರಾದ ವಿಜಯಣ್ಣ ಮತ್ತು ಕೇಶವಣ್ಣ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಅಮೃತ ಫಲಹಾರವನ್ನು ನಡೆಸಲಾಯಿತು.

error: Content is protected !!
Scroll to Top