ಸುಳ್ಯ: ವಿಧಾನಸಭಾ ಕ್ಷೇತ್ರಕ್ಕೆ 2025-26 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯೋಜನೆಯಡಿ ರಸ್ತೆ ಅಭಿವೃದ್ಧಿಯ ಹಿನ್ನೆಲೆಯಲ್ಲಿ 75 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದೆ.
ಹಂಚಿಕೆಯಾಗಿರುವ ಅನುದಾನದಡಿ ವಿವಿಧ ಕ್ರಿಯಾ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ಸರ್ಕಾರ ನಿರ್ಧರಿಸಿದೆ.
ಒಟ್ಟು ಅನುದಾನ: ₹75.00 ಲಕ್ಷಗಳು (8 ಕಾಮಗಾರಿಗಳಿಗೆ)
ಅನುಮೋದನೆಗೊಂಡಿದೆ.
ಕಾಮಗಾರಿಗಳ ವಿವರ:
ಸುಳ್ಯ ತಾಲೂಕು ಎಡಮಂಗಲ ಗ್ರಾಮದ ಡೆಮ್ಮಾಯಿಲ ಪ. ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 10 ಲಕ್ಷ
ಸುಳ್ಯ ತಾಲೂಕು ದೇವಚಳ್ಳ ಗ್ರಾಮದ ಮುಳಿಯಡ್ಕ-ವಾಲ್ತಾಜೆ ಪ. ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 15 ಲಕ್ಷ
ಸುಳ್ಯ ತಾಲೂಕು ಅಮರಮುಡ್ನೂರು ಗ್ರಾಮದ ಕೊಡ್ಲುಗುಳಿ-ಪಾರೆ ಪ. ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 10 ಲಕ್ಷ
ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಕೂಟೇಲು ಪ. ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 10 ಲಕ್ಷ
ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ನೆತ್ತಾರು ಗುಂಡಿ ಪ. ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ
ಕಡಬ ತಾಲೂಕು ಎಡಮಂಗಲ ಗ್ರಾಮದ ಆಲೆಕ್ಕಾಡಿ-ನೂಜಾಡಿ ಪ. ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 6 ಲಕ್ಷ
ಸುಳ್ಯ ತಾಲೂಕು ಮುರುಳ್ಯ ಗ್ರಾಮದ ನವಗ್ರಾಮ ಪ್ರಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 6 ಲಕ್ಷ
ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಶ್ರೇಣಿ-ಅಜ್ಜಮೂಲೆ ಕೃಷಿ ಕಾಲೋನಿ ಪ. ಜಾತಿ ಕಾಲೋನಿ ರಸ್ತೆ ಅಭಿವೃದ್ಧಿಗೆ 8 ಲಕ್ಷ
























