ಮಹಿಳಾ ಅಧಿಕಾರಿಯ ರಹಸ್ಯ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದ ಮೂವರ ಬಂಧನ

ಬೆಡ್‌ರೂಮ್‌ನ ಲೈಟಿಂಗ್ ವೋಲ್ಟರ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದದ ಪಾತಕಿಗಳು

ಬೆಂಗಳೂರು : ಬೆಳಗಾವಿಯ ಮಹಿಳಾ ಅಧಿಕಾರಿಯೊಬ್ಬರ ಬೆಡ್‌ರೂಮ್‌ನೊಳಗೆ ಕ್ಯಾಮರಾ ಇಟ್ಟು ಖಾಸಗಿ ಕ್ಷಣಗಳನ್ನು ಸೆರೆ ಹಿಡಿದು 50 ಲಕ್ಷ ರೂ. ಕೊಡುವಂತೆ ಬ್ಲಾಕ್‌ಮೇಲ್‌ ಮಾಡುತ್ತಿದ್ದ ನಕಲಿ ಪತ್ರಕರ್ತರನ್ನು ಬೆಳಗಾವಿ ಪೊಲೀಸರು ಬಂದಿಸಿ ಜೈಲಿಗಟ್ಟಿದ್ದಾರೆ.

ಮನೆಗೆ ನುಗ್ಗಿ ಬೆಡ್‌ರೂಮ್‌ನಲ್ಲಿದ್ದ ಲೈಟಿಂಗ್ ವೋಲ್ಟರ್‌‌ಗಳಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದ್ದ ಆರೋಪಿಗಳು ಖಾಸಗಿ ದೃಶ್ಯ ಸೆರೆಯಾದ ಬಳಿಕ ಮಹಿಳಾ ಅಧಿಕಾರಿಗೆ 50 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದರು‌. ಹಣ ಕೊಡದಿದ್ದರೆ ಸೋಷಿಯಲ್ ಮಿಡಿಯಾದಲ್ಲಿ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬ್ಲಾಕ್‌ಮೇಲ್‌ ಮಾಡುತ್ತಿದ್ದರು. ನಕಲಿ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತು ಮಹಿಳಾ ಅಧಿಕಾರಿ ಪೊಲೀಸ್ ಕಮೀಷನರ್‌ ಮೊರೆಹೋಗಿದ್ದರು.





















































 
 

ಗೋಕಾಕ್‌ ನಗರದ ಜಲಾಲ್ ಗಲ್ಲಿಯ ಸಮೀರ್ ನಿಸಾರ್‌ ಅಹ್ಮದ್ ಶೇಖ್, ಗೋಕಾಕ್‌ ಹೊರವಲಯದ ಯೋಗಿಕೊಳ್ಳದ ಅಬ್ಬುಲ್‌ ರಶೀದ್ ಮಕಾಂದಾರ್, ಘಟಪ್ರಭಾ ನಿವಾಸಿ ಮೊಹಮ್ಮದ್ ದಿಲಾವರ್ ಬಾಲೇಕುಂದ್ರಿ ಬಂಧಿತರು ಎಂದು ಗುರುತಿಸಲಾಗಿದೆ. ಖಾಸಗಿ ವಿಡಿಯೋ ಸೆರೆಹಿಡಿಯಲು ಕಿರಾತಕರು ಮಾಡಿದ ಐಡಿಯಾ ಕಂಡು ಸ್ವತಃ ಪೊಲೀಸರೇ ನಿಬ್ಬೆರಗಾಗಿದ್ದಾರೆ‌. ಬಂಧಿತರಿಂದ ಎರಡು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಅಲ್ಟ್ರಾ ಮೊಬೈಲ್, ವಿವೋ ಮೊಬೈಲ್, 64 ಜಿಬಿ ಪೆನ್‌ಡ್ರೈವ್, 6 ಹಿಡನ್ ಕ್ಯಾಮೆರಾ, ಎರಡು ಒಟಿಜಿ, ಎರಡು ಮೆಮೊರಿ ಕಾರ್ಡ್, 128 ಜಿಬಿಯ 8 ಮೆಮೊರಿ ಕಾರ್ಡ್, ಇನ್ನೋವಾ ಕ್ರಿಸ್ಟಾ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ‌.

ಮೊದಲು ಮಹಿಳಾ ಅಧಿಕಾರಿ ಮನೆಕೆಲಸದವನಿಗೆ ಗಾಳ ಹಾಕಿದ್ದ ಕಿರಾತಕರು ಕಚೇರಿಗೆ ಹೋಗುವಾಗ ಆಗಾಗ ಕಿಟಕಿಯಲ್ಲಿ ಮನೆ ಕೀಲಿಯನ್ನು ಮಹಿಳಾ ಅಧಿಕಾರಿ ಇಟ್ಟು ಹೋಗ್ತಿದ್ದನ್ನು ಖಚಿತಪಡಿಸಿಕೊಂಡಿದ್ದಾರೆ‌. ಕಿಟಕಿಯಲ್ಲಿ ಕೀಲಿ ಇಟ್ಟು ಹೋಗುವ ವಿಷಯ ಮನೆ ಕೆಲಸದ ವ್ಯಕ್ತಿ ಮಾತ್ರ ಗೊತ್ತಿತ್ತು. ಆತನಿಗೆ ಹಣ ಕೊಟ್ಟು ಕೀಲಿ ಇಟ್ಟು ಹೋದಾಗ ಮಾಹಿತಿ ನೀಡುವಂತೆ ತಿಳಿಸಿದ್ದರು.

2 ತಿಂಗಳ ಹಿಂದೆ ಕೀಲಿ ಇಟ್ಟು ಹೋದಾಗ ಕಿರಾತಕರಿಗೆ ಮನೆ ಕೆಲಸದವ ಮಾಹಿತಿ ನೀಡಿದ್ದ. ಆಗ ಮನೆಗೆ ನುಗ್ಗಿ ಬೆಡ್ ರೂಂ, ಹಾಲ್‌ನ ಲೈಟ್ ಹೋಲ್ಡರ್‌ನಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದ್ದ ಖದೀಮರು ಮಹಿಳಾ ಅಧಿಕಾರಿ ಅನ್ಯವ್ಯಕ್ತಿ ಜೊತೆಗೆ ಖಾಸಗಿ ಸಮಯ ಕಳೆಯುವ ದೃಶ್ಯಗಳನ್ನು ರಹಸ್ಯ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು.

ದೃಶ್ಯ ಸೆರೆಯಾದ ಬಳಿಕ ಅಧಿಕಾರಿ ಮನೆಯಲ್ಲಿ ಇಲ್ಲದಾಗ ಕ್ಯಾಮೆರಾ ತೆಗೆದುಕೊಂಡಿದ್ದರು. ಬಳಿಕ ಮೆಮೊರಿ ಕಾರ್ಡ್‌ನಲ್ಲಿನ ಸಂಗ್ರಹವಾಗಿದ್ದ ಖಾಸಗಿ ದೃಶ್ಯಗಳನ್ನು ಪೆನ್‌ಡ್ರೈವ್‌ಗೆ ಹಾಕಿಕೊಂಡ ಆಸಾಮಿಗಳು ಬಳಿಕ 2 ತಿಂಗಳಿಂದ 50 ಲಕ್ಷ ಹಣ ಕೊಡುವಂತೆ ಪೀಡಿಸುತ್ತಿದ್ದರು. ಈ ನಕಲಿ ಪತ್ರಕರ್ತರ ಕಿರುಕುಳಕ್ಕೆ ಬೇಸತ್ತು ಮಹಿಳಾ ಅಧಿಕಾರಿ ಪೊಲೀಸರ ಮೊರೆ ಹೋಗಿದ್ದರು. ಸದ್ಯ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಮೂವರು ನಕಲಿ ಪತ್ರಕರ್ತರನ್ನು ಬಂಧಿಸುವಲ್ಲಿ ಯಶ್ವಸ್ವಿಯಾಗಿದ್ದಾರೆ.

error: Content is protected !!
Scroll to Top