ಪುತ್ತೂರು: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಪುತ್ತೂರು ಸೆಂಟರ್ ಮತ್ತು ಯು.ಎಸ್. ಕಮ್ಯುನಿಕೇಶನ್ಸ್ ವತಿಯಿಂದ ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಅರಿವು ಎಂಟರ್ಪ್ರೈಸಸ್ನ ಸಹಯೋಗದೊಂದಿಗೆ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮುಕ್ತ ಬೃಹತ್ ತಾಂತ್ರಿಕ ವಸ್ತು ಪ್ರದರ್ಶನ ‘ಬಿಲ್ಸ್ ಟೆಕ್ -2026* ಫೆ.21ರಿಂದ ಮೂರು ದಿನ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದ ಗದ್ದೆಯಲ್ಲಿ ನಡೆಯಲಿರುವುದಾಗಿ ಅಸೋಸಿಯೇಶನ್ ಆಫ್ ಕನ್ಸಲಿಂಗ್ ಸಿವಿಲ್ ಇಂಜಿನಿಯರ್ ಪುತ್ತೂರು ಸೆಂಟರ್ನ ಅಧ್ಯಕ್ಷ ಶಿವರಾಮ ಮತಾವು ತಿಳಿಸಿದ್ದಾರೆ.
ಈ ಮೂರು ದಿನದ ಪ್ರದರ್ಶನದಲ್ಲಿ ನಿರ್ಮಾಣ ಕ್ಷೇತ್ರದ ಅವಿಷ್ಕಾರವನ್ನು ಜನರಿಗೆ ತಲುಪಿಸುವ ಒಂದು ಅವಕಾಶವಾಗಿದೆ. ಇವತ್ತಿನ ಕಾಲದಲ್ಲಿ ಸದೃಢ ಸುಂದರ ಹಾಗು ಸುಸಜ್ಜಿತ ಮನೆ ನಮ್ಮೆಲ್ಲರ ಕನಸು. ಅಗತ್ಯ ಪರಿಕರಗಳಷ್ಟೇ ಅಲ್ಲದೆ ಆಕರ್ಷಕ ಮನೆ ನಿರ್ಮಾಣಕ್ಕೆ ಅವಶ್ಯವಿರುವ ವಸ್ತುಗಳು ಒಂದೇ ಕಡೆ ದೊರೆತು ಮನೆ ಅಲಂಕಾರಕ್ಕೆ ತಂತ್ರಜ್ಞಾನದ ಮಾರ್ಗದರ್ಶನ ಸಿಕ್ಕರೆ ಸುಂದರ ಮನೆ ನಿರ್ಮಣವಾಗುವುದರಲ್ಲಿ ಸಂದೇಹವಿಲ್ಲ. ಈ ಬಗ್ಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಈ ಪ್ರದರ್ಶನ ಏರ್ಪಡಿಸಲಾಗಿದೆ. ಕಟ್ಟಡ ಕಟ್ಟುವ ಉದ್ದೇಶ ಹೊಂದಿರುವ ಸಾರ್ವಜನಿಕರಿಗೆ ಮತ್ತು ಈಗಾಗಲೇ ಮನೆ ಕಟ್ಟುತ್ತಿರುವವರಿಗೆ ಕಟ್ಟಡ ಸಾಮಾಗ್ರಿಗಳ ಬಗ್ಗೆ ಸಮರ್ಗ ಮಾಹಿತಿ ಒದಗಿಸುವ ಉದ್ದೇಶದಿಂದ ಒಂದೇ ಸೂರಿನಡಿಯಲ್ಲಿ ಸಮಗ್ರ ಕಟ್ಟಡ ಸಾಮಾಗ್ರಿಗಳ ಪ್ರದರ್ಶನ ಮತ್ತು ಮಾಹಿತಿ ಒದಗಲಿದೆ ಎಂದ ಅವರು ಸುಮಾರು 60ಕ್ಕೂ ಮಿಕ್ಕಿ ಸ್ಟಾಲ್ಗಳಲ್ಲಿ ಪ್ರದರ್ಶನಗಳಿವೆ ಎಂದು ಹೇಳಿದ್ದಾರೆ.
ಕಂಪೆನಿಯವರೊ೦ದಿಗೆ ಮುಕ್ತ ಸಮಾಲೋಚನೆ:
ಬೃಹತ್ ಪ್ರದರ್ಶನದಲ್ಲಿ ಹಲವಾರು ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮಾಡಲಿವೆ.
ಸಾಮಾನ್ಯ ಕಟ್ಟಡ ಸಾಮಾಗ್ರಿಗಳಾದ ಸಿಮೆಂಟ್, ಬ್ರಿಕ್ಸ್, ಅಗ್ರಿಗೇಟ್, ಎಂ.ಸೆಂಡ್, ಸ್ಟೀಲ್, ಪ್ಲಂಬಿಂಗ್, ಟೈಲ್ಸ್, ಫೈವುಡ್, ಇಂಟೀರಿಯರಿಗೆ ಸಂಬಂಧಿಸಿದ ಪರಿಕರಗಳು, ವಿಕ್ಟೋರಿಯರ್ ಉತ್ಪನ್ನಗಳು, ಸೋಲಾರ್ ಮತ್ತು ಎಲೆಕ್ಟಿಕಲ್ ಉತ್ಪನ್ನಗಳು, ಅತ್ಯಾಧುನಿಕ ಗುಣಮಟ್ಟದ ಸೆಕ್ಯೂರಿಟಿ ಉತ್ಪನ್ನಗಳು, ಯುಪಿವಿಸಿ ಡೋರ್ಸ್ ಮತ್ತು ವಿಂಡೋಸ್, ಫ್ರೆಂಟ್ ಮತ್ತು ಅಡೆಸ್ಟೀವ್, ವಾಟರ್ ಫೂಫಿಂಗ್ ಹೀಗೆ ಹತ್ತು ಹಲವಾರು ಉತ್ಪನ್ನಗಳು ವಿವಿಧ ನವನವೀನ ಸಕಲ ವಿನ್ಯಾಸಗಳು ಪ್ರದರ್ಶನದಲ್ಲಿ ಇವೆ. ಪ್ರಾಪರ್ಟಿ ಸಂಬಂಧಿತ ಮಳಿಗೆಗಳನ್ನು ಕೂಡಾ ಇಲ್ಲಿ ಹಾಕಲಾಗಿದ್ದು, ಗ್ರಾಹಕರು ಪ್ಲಾಟ್ ಅಥವಾ ನಿವೇಶನಗಳನ್ನು ಖರೀದಿಸಬಹುದು. ವಿಶೇಷ ಆಕರ್ಷಣೆಯಾಗಿ ಎಲ್ಲಾ ತರದ ವಾಹನಗಳ ಮೇಳವನ್ನು ಆಯೋಜಿಸಲಾಗಿದೆ.
ಸಾರ್ವಜನಿಕರು ಮುಕ್ತವಾಗಿ ಬಂದು ಕಟ್ಟಡ ಸಾಮಾಗ್ರಿಗಳನ್ನು ವೀಕ್ಷಿಸಿ ತಮ್ಮ ತಮ್ಮಸಮಸ್ಯೆಗಳನ್ನು ಕಂಪೆನಿ ಪದಾಧಿಕಾರಿಗಳಿಗೆಮತ್ತು ಸ್ಥಳೀಯ ಡೀಲರ್ಸ್ ಗಳ ಜೊತೆ ಮುಕ್ತವಾಗಿ ಸಮಾಲೋಚಿಸಬಹುದು. ಪ್ರದರ್ಶನವು ಬೆಳಗ್ಗೆ ಗಂಟೆ 10.30ರಿಂದ ಸಂಜೆ ಗಂಟೆ 8.30ರ ತನಕ ಇರಲಿದೆ. ಕಟ್ಟಡ ಕಟ್ಟುವವರು, ಸಾರ್ವಜನಿಕರು, ವಿದ್ಯಾರ್ಥಿಗಳು ಕಾರ್ಯಕ್ರಮ ಸದುಪಯೋಗ ಪಡೆದುಕೊಳ್ಳಿ ಎಂದು ಶಿವರಾಮ ಮತಾವು ತಿಳಿಸಿದ್ದಾರೆ.
ಪ್ರದರ್ಶನ ಮಳಿಗೆ ಉದ್ಘಾಟನೆ: ಉದ್ಘಾಟನಾ ಕಾರ್ಯಕ್ರಮ ಫೆ. 21ರಂದು ಬೆಳಗ್ಗೆ ನಡೆಯಲಿದ್ದು, ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ.ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪುತ್ತೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜೇಶ್ ರೈ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಮಾಸ್ಟರ್ ಪ್ಲಾನರಿಯ ಎಸ್. ಕೆ.ಆನಂದ್,ಬೆಳ್ತಂಗಡಿ ಇಂಜಿನಿಯರಿಂಗ್ ಅಸೋಸಿಯೆಶನ್ಸ್ ನ ಅಧ್ಯಕ್ಷ ಜಗಗದೀಶ್ ಎಸ್. ಸುಳ್ಯದ ಕೃಷ್ಣರಾವ್ ಸಹಿತ ಎಲ್ಲಾ ಇಂಜಿನಿಯರ್ಸ್ ಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಶಿವರಾಮ ಮತಾವು ಅವರು ಹೇಳಿದ್ದಾರೆ.
ಉತ್ಪಾದಕರು, ಗ್ರಾಹಕರ ನಡುವಿನ ಗ್ರಾಪ್ ತುಂಬುವ ಕೆಲಸ: ಯು. ಎಸ್. ಕಮ್ಯುನಿಕೇಶನ್ ಇವೆಂಟ್ ಮ್ಯಾನೇಜ್ಮೆಂಟ್ನ ಉಮಾಪತಿ ಅವರು ಮಾತನಾಡಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಾವು ಬಿಲ್ಡ್ ಟಿಕ್ ಮೇಳವನ್ನು ಮಾಡುತ್ತಿದ್ದೇವೆ. ಈ ಮೇಳದಲ್ಲಿ ಕಟ್ಟಡ ಸಾಮಾಗ್ರಿ ಗಳಿಗೆ ಸಂಬಂಧಿಸಿ ಸುಮಾರು 60 ರಿಂದ 70ರ ತನಕ ಬೇರೆ ಬೇರೆ ಕಂಪೆನಿಗಳು ಭಾಗವಹಿಸಲಿವೆ.ಈಗಾಗಲೇ 40 ಸ್ಟಾಲ್ ಗಳು ನೋಂದಾವಣೆಗೊಂಡಿವೆ.ಬೆಂಗಳೂರು, ಪೂನಾ ಸಹಿತ ದೇಶದ ವಿವಿಧ ಕಡೆಗಳಿಗೆ ಕಂಪೆನಿಗಳು ಬರಲಿದೆ. ಲೋಕಲ್ ಸಂಸ್ಥೆಗಳು ಕೂಡಾ ಪ್ರದರ್ಶನದಲ್ಲಿ ಭಾಗವಹಿಸಲಿದೆ.ಸುಮಾರು 2003ರಿಂದ ರಾಜ್ಯಾದ್ಯಂತ ಇಂತಹ ಕಾರ್ಯಕ್ರಮ ಆಯೋಜಿಸಿದ್ದೇವೆ. ಉತ್ಪಾದಕರು ಮತ್ತು ಕಾರ್ಮಿಕರು ಹಾಗು ಗ್ರಾಹಕರ ನಡುವಿನ ಗ್ಯಾಪ್ ತುಂಬುವ ಕೆಲಸ ನಾವು ಮಾಡುತ್ತಿದ್ದೇವೆ. ಕಟ್ಟಡ ಕಟ್ಟುವ ಮಾಲಕರಿಗೆ, ಇಂಜಿನಿಯರ್ಗಳಿಗೆ, ಸಾಮಾಗ್ರಿ ಪೂರೈಕೆದಾರರಿಗೆ, ಉತ್ಪಾದಕರಿಗೆ ಕೊಂಡಿಯಾಗಿ ಈ ವಸ್ತು ಪ್ರದರ್ಶನ ಆಗಿದೆ. ಉತ್ಪನ್ನಗಳ ಗುಣಮಟ್ಟ, ದರ, ಎಲ್ಲಿ ಸಿಗುತ್ತವೆ ಎಂಬ ವಿಚಾರಗಳನ್ನು ಕಂಪೆನಿಯ ತಾಂತ್ರಿಕ ವ್ಯಕ್ತಿಗಳು ಬಂದು ಸ್ಥಳದಲ್ಲಿ ಮಾಹಿತಿ ನೀಡಲಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಎಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಪುತ್ತೂರು ಸೆಂಟರ್ನ ಕಾರ್ಯದರ್ಶಿ ವೆಂಕಟ್ರಾಜ್, ನಮಿತಾ, ಚಂದ್ರಶೇಖರ್ ಆಳ್ವ, ಸುದ್ದಿ ಅರಿವು ಸೆಂಟರ್ ಮುಖ್ಯಸ್ಥೆ ನಮಿತಾ ಉಪಸ್ಥಿತರಿದ್ದರು.
























