ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ವಿಟ್ಲ, ಪೆರ್ನೆ ವಲಯದ ಪೆರ್ನೆ ಬಿ ಕಾರ್ಯಕ್ಷೇತ್ರದ ಅತ್ರಬೈಲು ನಿವಾಸಿ ಕಮಲ-ಮೋನಪ್ಪ ಮತ್ತು ಕೆದಿಲ ಎ ಕಾರ್ಯಕ್ಷೇತ್ರದ ಸತ್ತಿಕಲ್ಲು ನಿವಾಸಿ ಸೆಲ್ಮಾರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದ ಫಲಾನುಭವಿಗಳಾಗಿದ್ದು, ಇವರಿಗೆ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನೀಡಿರುವ ದಿನ ಬಳಕೆಗೆ ಉಪಯೋಗವಾಗುವಂತಹ ವಾತ್ಸಲ್ಯ ಕಿಟ್ ಅನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಗಣ್ಯರಾದ ನವೀನ್ ಕುಮಾರ್ ಪದಬರಿ, ಲಕ್ಷ್ಮೀ ಮನೋಹರ ನಾಯಕ್, ಸುಬ್ರಹ್ಮಣ್ಯ ಭಟ್ ಬೀಡಿಗೆ, ಜ್ಞಾನವಿಕಾಸ ಸಮನ್ವಯಾಧಿಕಾರಿ ದೀಪಾ, ವಲಯ ಮೇಲ್ವಿಚಾರಕಿ ಶಾರದಾ ಎ., ಸೇವಾಪ್ರತಿನಿಧಿಗಳಾದ ಶಶಿಕಲಾ, ಶಾರದಾ ಕೆ., ಒಕ್ಕೂಟದ ಅಧ್ಯಕ್ಷರಾದ ಯಶೋದಾ, ಗೋಪಾಲ ಸಪಲ್ಯ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಾದ ಸುರೇಶ್ ನೂಜೆ, ಗಿರೀಶ್ ಕುಮಾರ್ ಕಾಂಜಲಿಕೆ ಮತ್ತು ಜಗದೀಶ್ ಕೆರೆಕೋಡಿ ಉಪಸ್ಥಿತರಿದ್ದರು.

