ಚೆನ್ನೈಯಲ್ಲಿ ಪಕ್ಷಿಜ್ವರ ಹಾವಳಿ : ನೂರಾರು ಕಾಗೆಗಳು ಬಲಿ

ನಗರದಲ್ಲಿ ಸತ್ತು ಬೀಳುತ್ತಿರುವ ಕಾಗೆಗಳು, ಕೋಳಿ ಫಾರಂಗಳಿಗೆ ಕಟ್ಟೆಚ್ಚರ ಘೋಷಣೆ

ಚೆನ್ನೈ: ಚೆನ್ನೈಯಲ್ಲಿ ಪಕ್ಷಿಜ್ವರ ಅಥವಾ ಎಚ್‌5ಎನ್‌1 ವೈರಾಣು ಹಾವಳಿ ಪ್ರಾರಂಭವಾಗಿದ್ದು, ನೂರಾರು ಕಾಗೆಗಳು ಈ ವೈರಸ್‌ ತಗಲಿ ಮೃತಪಟ್ಟಿರುವುದು ದೃಢಪಟ್ಟಿದೆ.

ನಗರದೆಲ್ಲೆಡೆ ಕಾಗೆಗಳು ಸತ್ತು ಬಿದ್ದಿರುವ ದೃಶ್ಯ ಕಂಡುಬಂದಿದ್ದು, ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಹೈಅಲರ್ಟ್‌ ಘೋಷಿಸಿದೆ. ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆಗೊಳಿಸಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.





















































 
 

ಎಚ್‌5ಎನ್‌1 ವೈರಾಣು ಹರಡುವುದನ್ನು ತಡೆಯಲು ಸತ್ತಿರುವ ಕಾಗೆಗಳನ್ನು ಹಾಗೂ ಕೋಳಿಗಳನ್ನು ಆರೋಗ್ಯ ಅಧಿಕಾರಿಗಳ ಸೂಚನೆ ಪ್ರಕಾರ ನಾಶ ಮಾಡಬೇಕು ಇಲ್ಲವೇ ಆಳವಾದ ಗುಂಡಿಯಲ್ಲಿ ಹೂಳಬೇಕು. ಸಾರ್ವಜನಿಕರು ಬರಿಗೈಯಲ್ಲಿ ಸತ್ತಿರುವ ಪಕ್ಷಿಗಳನ್ನು ಮುಟ್ಟಬಾರದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.

ಚೆನ್ನೈ ನಗರದ ಅಡ್ಯಾರ್‌ ಎಂಬಲ್ಲಿ ಅತಿಹೆಚ್ಚು ಕಾಗೆಗಳು ಸತ್ತಿವೆ. ಕೂಡಲೇ ಎಚ್ಚೆತ್ತಿರುವ ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

ಪಕ್ಷಿಜ್ವರ ಅಥವಾ ವೈಜ್ಞಾನಿಕವಾಗಿ ಏವಿಯನ್‌ ಇನ್‌ಫ್ಲುಯೆನ್ಝ ಎಂದು ಕರೆಯಲ್ಪಡುವ ಈ ವೈರಾಣು ವಾತಾವರಣದಲ್ಲಿ ಕ್ಷಿಪ್ರವಾಗಿ ಹರಡುವ ಗುಣ ಹೊಂದಿದೆ. ಪಕ್ಷಿಗಳಿಂದ ಮನುಷ್ಯರಿಗೆ ಹರಡುತ್ತಿದೆ. ಹೀಗಾಗಿ ಕೋಳಿ ಮುಂತಾದ ಪಕ್ಷಿಗಳನ್ನು ಸಾಕುವವರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ಈ ವೈರಾಣು ಮೊದಲು ಪಕ್ಷಗಳು ಮತ್ತು ಕೋಳಿಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದರೆ ಕೆಲವೇ ದಿನಗಳಲ್ಲಿ ಇಡೀ ಕೋಳಿ ಫಾರಂಗೆ ಹರಡಿ ಊರಿಗೆ ಭೀತಿಯನ್ನು ತಂದೊಡ್ಡುತ್ತದೆ.

error: Content is protected !!
Scroll to Top