ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಇಂದು ಸಹ ವಿಚಾರಣೆ ನಡೆದಿದ್ದು, ಧರ್ಮಸ್ಥಳ ಕ್ಷೇತ್ರದ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ಬೆಳ್ತಂಗಡಿಯ ನ್ಯಾಯಾಲಯದಲ್ಲಿ ಇಂದು ವಾದ ಮಂಡನೆ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಪಟ್ಟವರಿಗೆ ಹಾನಿಯಾಗಿದೆ. ಅವರನ್ನು ಸಂತ್ರಸ್ತರು ಎಂದು ಪರಿಗಣಿಸಬೇಕು. ಕಾನೂನಿನಡಿ ಸಂತ್ರಸ್ತ ಪದದ ವ್ಯಾಖ್ಯಾನದ ಬಗೆಗೂ ತಿಳಿಸಿದ ಅವರು, ಈ ಪ್ರಕರಣದಲ್ಲಿ ಕ್ಷೇತ್ರದವರನ್ನು ಸಂತ್ರಸ್ತರನ್ನಾಗಿ ಮಾಡಬೇಕಾದ ಅನಿವಾರ್ಯತೆಯ ಬಗ್ಗೆ ಅವರು ಮನವರಿಕೆ ಮಾಡಿಕೊಟ್ಟರು.
ಇದೇ ಸಂದರ್ಭದಲ್ಲಿ SIT ಪರ ವಕೀಲ ದಿವ್ಯರಾಜ್ ಹೆಗ್ಡೆ ಅವರು ಧರ್ಮಸ್ಥಳ ಪರ ಸಲ್ಲಿಕೆಯಾಗಿರುವ ಅರ್ಜಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದರು. ಹಾಗೆಯೇ ಧರ್ಮಸ್ಥಳ ಕ್ಷೇತ್ರದವರನ್ನು ಹೆಚ್ಚುವರಿ ಫಿರ್ಯಾಧಿದಾರರನ್ನಾಗಿ ಮಾಡಲು ಅವಕಾಶ ನೀಡದಂತೆ ವಾದಿಸಿದರು. ಮಹೇಸಅ ಶೆಟ್ಟಿ ತಿಮರೋಡಿ ಪರ ವಕೀಲ ವಿಜಯ್ ವಾಸು ಪೂಜಾರಿ ಅವರು ನಾಗೇಶ್ ಅವರ ವಾದಕ್ಕೆ ಆಕ್ಷೇಪಣೆ ಸಲ್ಲಿಸಿ, ವಾದ ಮಂಡನೆಗೆ ಕಾಲಾವಕಾಶ ನೀಡುವಂತೆ ಕೋರ್ಟ್ಗೆ ಮನವಿ ಮಾಡಿದರು.
ನ್ಯಾಯಾಲಯವು ತಿ ರೋಡ್ ಪರ ವಕೀಲರಿಗೆ ವಾದಕ್ಕೆ ಅವಕಾಶ ಕಲ್ಪಿಸಿ ಫೆ. 13 ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿದೆ.
ನ್ಯಾಯಾಲಯದಲ್ಲಿ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಸಹ ವಿಚಾರಣೆಗೆ ಹಾಜರಾಗಿದ್ದನು. ಧರ್ಮಸ್ಥಳ ಪರ ವಕೀಲ ನಾಗೇಶ್ ಅವರಿಗೆ ವಕೀಲ ಮಹೇಶ್ ಕಜೆ ಮತ್ತು ರಾಜಶೇಖರ ಹಿಲಿಯಾರ್ ಸಾಥ್ ನೀಡಿದರು.
























