ವಿದೇಶದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ನೆಲೆಸಿದ ಮಹಿಳೆಯರು ಭಾರತಕ್ಕೆ ಸುಂಕವಿಲ್ಲದೆ ತರಬಹುದು 40 ಗ್ರಾಂ ಚಿನ್ನ

ನವದೆಹಲಿ: ವಿದೇಶಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರ ಬ್ಯಾಗೇಜ್ ನಿಯಮಗಳಲ್ಲಿ ಬದಲಾವಣೆಯಾಗಿದ್ದು, ಚಿನ್ನಾಭರಣವನ್ನು ಒಳಗೊಂಡಂತೆ ಸುಂಕ ಇಲ್ಲದೆ ಹಲವಾರು ವಸ್ತುಗಳನ್ನು ದೇಶದೊಳಕ್ಕೆ ತರಲು ಇದ್ದ ಮಿತಿಯನ್ನು ಮತ್ತಷ್ಟು ವಿಸ್ತರಣೆ ಮಾಡಲಾಗಿದೆ.

ಫೆ. 2 ರಿಂದಲೇ ಅನ್ವಯಿಸುವಂತೆ 2026 ರ ಬ್ಯಾಗೇಜ್ ನಿಯಮಗಳನ್ವಯ ಈ ಹಿಂದಿನ ಐವತ್ತು ಸಾವಿರ ರೂ. ವಸ್ತುಗಳ ಮಿತಿಯನ್ನು ಎಪ್ಪತೈದು ಸಾವಿರ ರೂ. ಗಳಿಗೆ ಏರಿಕೆ ಮಾಡಲಾಗಿದ್ದು, ಅಷ್ಟು ಮೌಲ್ಯದ ವಸ್ತುಗಳನ್ನು ಯಾವುದೇ ಸುಂಕ ಇಲ್ಲದೆ ಭಾರತಕ್ಕೆ ತರಲು ಅವಕಾಶ ನೀಡಲಾಗಿದೆ.

ಹಾಗೆಯೇ ಒಂದು ವರ್ಷಕ್ಕಿಂತ ಅಧಿಕ ಕಾಲ ವಿದೇಶದಲ್ಲಿ ನೆಲೆಸಿದ್ದ ಮಹಿಳೆಯರು ನಲವತ್ತು ಗ್ರಾಂ ಗಳಷ್ಟು ಮತ್ತು ಪುರುಷರು 20 ಗ್ರಾಂ ಗಳಷ್ಟು ಚಿನ್ನವನ್ನು ಯಾವುದೇ ಸುಂಕ ಪಾವತಿ ಮಾಡದೆ ಭಾರತಕ್ಕೆ ತರುವ ಅವಕಾಶ ನೀಡಲಾಗಿದೆ. 18 ವರ್ಷ ಮೇಲ್ಪಟ್ಟವರಿಗೆ ಒಂದು ಲ್ಯಾಪ್‌ಟಾಪ್ ಮತ್ತು ಒಂದು ನೋಟ್ ಪ್ಯಾಡ್ ಅನ್ನು ಯಾವುದೇ ಸುಂಕ ಪಾವತಿ ಮಾಡದೆಯೇ ತರುವ ಅವಕಾಶ ನೀಡಲಾಗಿದೆ.





















































 
 
error: Content is protected !!
Scroll to Top