ವಾಟ್ಸಾಪ್ ಮಾತೃ ಸಂಸ್ಥೆ ಮೆಟಾವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್: ಯಾಕೆ ಗೊತ್ತಾ?

ನವದೆಹಲಿ: ಬಳಕೆದಾರರ ಖಾಸಗಿ ಮಾಹಿತಿ ರಕ್ಷಣೆಗೆ ಸಂಬಂಧಿಸಿದ ಹಾಗೆ ಕಠಿಣ ನಿಲುವು ತೆಗೆದುಕೊಂಡಿರುವ ಸುಪ್ರೀಂ ಕೋರ್ಟು ವಾಟ್ಸಾಪ್ ಮಾತೃ ಸಂಸ್ಥೆಯಾದ ಮೆಟಾ‌ಗೆ ಎಚ್ಚರಿಕೆ ನೀಡಿದೆ.

ಭಾರತೀಯರ ಡಿಜಿಟಲ್ ಡೆಟಾ‌ದ ಮೇಲೆ ಯಾವುದೇ ಸಂಸ್ಥೆ ಹಿಡಿತ ಸಾಧಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ವಾಟ್ಸಾಪ್ ಗೌಪ್ಯತಾ‌ ನೀತಿ 2021 ರಲ್ಲಿ ಜಾರಿಗೆ ಬಂದಿದ್ದು, ಈ ಸಂಬಂಧದ ಅರ್ಜಿಯ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಭಾರತೀಯ ಬಳಕೆದಾರರ ಗೌಪ್ಯತೆ ಕಾಪಾಡುವುದು ಅಸಾಧ್ಯ ಎಂದಾದರೆ ಈ ದೇಶದಲ್ಲಿ ವ್ಯವಹಾರ ನಡೆಸುವ ಅಗತ್ಯವೇ ಇಲ್ಲ ಎಂದು ವಾಟ್ಸಾಪ್, ಮೆಟಾ‌ಗೆ ‌ಸ್ಪಷ್ಟವಾಗಿ ಕೋರ್ಟ್ ತಿಳಿಸಿದೆ. ನಮಗೆ ನಮ್ಮ ಸಂವಿಧಾನ ಮತ್ತು ಕಾನೂನುಗಳೇ ನಮಗೆ ಮುಖ್ಯ ಎಂದು ಒತ್ತಿ ಹೇಳಿದೆ.





















































 
 

ಇದೇ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗದ ರೀತಿಯಲ್ಲಿ ವಾಟ್ಸಾಪ್ ‌ನೀತಿ ಇರುವುದಕ್ಕೂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಚಾಟ್‌ನಲ್ಲಿ ಔಷಧ ಮಾಹಿತಿ ಹಂಚಿಕೊಂಡ ಕೂಡಲೇ ಅದಕ್ಕೆ ಸಂಬಂಧಿಸಿದ ಜಾಹೀರಾತು ಕಾಣಿಸಿಕೊಳ್ಳುವುದು ವಾಟ್ಸಾಪ್ ಡೇಟಾ ದುರುಪಯೋಗ ಮಾಡಿಕೊಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿ. ಇದಕ್ಕೆ ಮೆಟಾ ಉತ್ತರಿಸುವಂತೆಯೂ ಕೋರ್ಟ್ ಸೂಚಿಸಿದೆ.

error: Content is protected !!
Scroll to Top