ರಾಜ್ಯಸಭೆಯಲ್ಲಿ ಮೇಜಿನ ಮೇಲೆ ಕೃತಕ ಕಾಲುಗಳನ್ನಿಟ್ಟು ಸಿಪಿಎಂ‌ನ ಹಿಂಸಾತ್ಮಕ ರಾಜಕೀಯ ಕರಾಳತೆ ಬಿಚ್ಚಿಟ್ಟ ಸಂಸದ

ನವದೆಹಲಿ: ಸೋಮವಾರ ರಾಜ್ಯ ಸಭೆಯಲ್ಲಿ ಅತ್ಯಂತ ಭಾವುಕ ಸನ್ನಿವೇಶವೊಂದು ‌ಕಂಡು ಬಂದಿದ್ದು, ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡನೆಯ ವೇಳೆ ಕೇರಳದ ಬಿಜೆಪಿ ಸಂಸದ ಸದಾನಂದನ್ ಮಾಸ್ಟರ್ ಅವರು ತಮ್ಮ ಕೃತಕ ಕಾಲುಗಳನ್ನು ಮೇಜಿನ ಮೇಲಿಟ್ಟು, ಸಿಪಿಎಂ ಕರಾಳತೆಯಿಂದ ತಮಗಾದ ಅನ್ಯಾಯ, ದೌರ್ಜನ್ಯವನ್ನು ವಿವರಿಸಿ, ಭಾಷಣ ಮಾಡಿದರು.

ತಮ್ಮ ಮೊದಲ ಭಾಷಣದಲ್ಲಿ, ಮೂವತ್ತೊಂದು ವರ್ಷಗಳ ಹಿಂದೆ ನಡೆದ ಈ ಕರಾಳತೆಗೆ ಕಾರಣರಾದವರು ಇಂದು ಪ್ರಜಾಪ್ರಭುತ್ವದ ಬಗ್ಗೆ ಮಾತ ನೀಡುತ್ತಿದ್ದಾರೆ. ಅವರು ನನ್ನ ಮೇಲಿನ ಈ ದೌರ್ಜನ್ಯವನ್ನು ಮರೆಯಬಾರದು. ಅಂದು ನಾನು ಮನೆಗೆ ಮರಳುತ್ತಿದ್ದಾಗ ಇನ್ಕ್ವಿಲಾಬ್ ಜಿಂದಾಬಾದ್ ಹೇಳಿಕೊಂಡು ಬಂದ ದುಷ್ಟರು ‌ನನ್ನ ಎರಡೂ ಕಾಲುಗಳನ್ನು ಕಡಿದು ಹಾಕಿದರು ಎಂದು ಕೇರಳದ ರಾಜಕೀಯ ಕರಾಳತೆಯ ಸತ್ಯವನ್ನು ಅವರು ಬಿಚ್ಚಿಟ್ಟರು.

ಮೇಜಿನ ಮೇಲೆ ಕೃತಕ ಕಾಲುಗಳನ್ನು ಇರಿಸಿದ್ದು ಶಿಸ್ತು, ಶಿಷ್ಟಾಚಾರದ ಉಲ್ಲಂಘನೆ ಎಂದು ಸಿ ಪಿ ಎಂ ಸಂಸದ ಜಾನ್ ಬ್ರಿಟಾಸ್ ಆಕ್ಷೇಪ ವ್ಯಕ್ತಪಡಿಸಿದರು.





















































 
 

ಬ್ರಿಟಾಸ್ ಆಕ್ಷೇಪಕ್ಕೆ ತಕ್ಕ ತಿರುಗೇಟು ನೀಡಿದ ಅವರು, ಇಡೀ ದೇಶಕ್ಕೆ ನಿಜವಾದ ಪ್ರಜಾಪ್ರಭುತ್ವ ಅಂದರೆ ಏನು ಎನ್ನುವುದನ್ನು ತೋರಿಸಲು ನಾನು ಬಯಸುತ್ತೇನೆ. ಮಾನವೀಯತೆ, ಸಹನೆಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡುವ ನಿಮ್ಮ ರಾಜಕೀಯ ಸಿದ್ಧಾಂತದ ಹಿಂದೆ ಹಿಂಸೆ ಎಂಬ ಕಟು ಸತ್ಯ ಅಡಗಿದೆ. ಇಂತಹ ಹಿಂಸಾತ್ಮಕ ರಾಜಕೀಯ ಸಮಾಜಕ್ಕೆ ಆಪತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top