ಮುಕ್ತ ಗಂಗೋತ್ರಿ, ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ 21ನೆ ಘಟಿಕೋತ್ಸವದಲ್ಲಿ ಡಾ. ಹರಿಣಾಕ್ಷಿ ಎಂ. ಡಿ. ಯವರು ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಥಾವರ್’ಚಂದ್ ಗೆಹ್ಲೋಟ್ ಅವರಿಂದ Ph.D. ಪದವಿ ಪ್ರಮಾಣಪತ್ರವನ್ನು (Convocation Certificate) ಸ್ವೀಕರಿಸಿದರು.

2026ನೆ ಜನವರಿ 31ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ನಡೆದ ಸಮಾರಂಭದಲ್ಲಿ ಕುಲಪತಿಗಳಾದ ಪ್ರೊ. ಶರಣಪ್ಪ ವಿ. ಹಲಸೆ ಅವರು ಸ್ವಾಗತ, ಅತಿಥಿಗಳ ಪರಿಚಯ ಮತ್ತು ವರದಿ ವಾಚನಗಳನ್ನು ನೆರವೇರಿಸಿದರು.
ಡಾ. ಹರಿಣಾಕ್ಷಿ ಅವರು ಉಡುಪಿಯ ಕಲ್ಯಾಣಪುರದಲ್ಲಿರುವ ಮಿಲಾಗ್ರಿಸ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿ ಸೇವಾನಿರತರಾಗಿದ್ದಾರೆ. ಅವರು ಎಂ.ಫಿಲ್. ಪದವಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪಡೆದಿದ್ದರು.
























