ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಮಕ್ಕಳ ಮಾರ್ಟ್

ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ದಿನಾಂಕ ಮಕ್ಕಳ ಮಾರ್ಟ್(ಮೆಟ್ರಿಕ್ ಮೇಳ) ನಡೆಯಿತು.

ವಿದ್ಯಾರಶ್ಮಿ ಮಾರ್ಟ್ ಅನ್ನು ಎಸ್. ಎನ್. ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್‌ನ ಸದಸ್ಯ ಎನ್. ಸುಂದರ್ ರೈ ಅವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ ಮಾತನಾಡಿ, ಶಿಕ್ಷಣದ ಜೊತೆಗೆ ಮಕ್ಕಳಿಗೆ ಅವಶ್ಯವಿರುವ ಆರ್ಥಿಕ, ವ್ಯವಹಾರಿಕ, ಸಾಮಾನ್ಯ ಜ್ಞಾನ ಮತ್ತು ಕೌಶಲ್ಯವನ್ನು ಹೆಚ್ಚಿಸಲು ಇಂತಹ ಮಾರ್ಟ್ ಸಹಾಯಕವಾಗುತ್ತದೆ ಎಂದರು.





















































 
 

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸದಸ್ಯೆ ರಶ್ಮಿ ಅಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ರಾಜಲಕ್ಷ್ಮಿ ಎಸ್. ರೈ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಸದ್ಯರಾದ ತಿಮ್ಮಪ್ಪ ಪೂಜಾರಿ, ಅಶ್ರಫ್ ಎಂ. ಮಾಂತೂರು, ಜೈನುದ್ದೀನ್ ತೋಟದ ಮೂಲೆ, ಕವಿತ ಬರೆಪ್ಪಾಡಿ, ಪ್ರಾಂಶುಪಾಲೆ ಶಶಿಕಲಾ ಎಸ್. ಅಳ್ವ ಉಪಸ್ಥಿತರಿದ್ದರು.

ಲಿಬಾ ಫಾತಿಮಾ ನಿರೂಪಿಸಿದರು.

ಉದ್ಘಾಟನಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ತಿಂಡಿ ತಿನಸು, ವಿವಿಧ ಬಗೆಯ ತರಕಾರಿಗಳು ಇತರ ಪದಾರ್ಥಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು. ಪೋಷಕರು ಮಕ್ಕಳು ತಯಾರಿಸಿದ ಆಹಾರವನ್ನು ಸೇವಿಸಿ ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

error: Content is protected !!
Scroll to Top