ವೃದ್ಧೆಯ ಮೇಲೆ ಅತ್ಯಾಚಾರ, ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಮನೆಕೆಲಸದ ‌ವ್ಯಕ್ತಿ

ಬೆಂಗಳೂರು: ಕಾಮುಕ ‌ಮನೆಗೆಲಸದ ವ್ಯಕ್ತಿಯೊಬ್ಬ ತಾನು ಕೆಲಸ ಮಾಡುತ್ತಿದ್ದ ಮನೆಯ 65 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ, ಅವರನ್ನು ಕೊಂದು ಆ ಬಳಿಕ ತಾನೂ ಅದೇ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಕೋ ‌ಲೇಔಟ್ ನಡೆದಿದೆ.

ಆರೋಪಿ ತಮಿಳುನಾಡು ಹೊಸೂರು ಮೂಲದ ದೇವರಾಜ್ (5೦) ಕಳೆದ ಎಂಟು ವರ್ಷಗಳಿಂದ ವೃದ್ಧೆಯ ಮನೆ ಮತ್ತು ಆ‌ ಕಾಲನಿಯಲ್ಲಿರುವ ಇತರ ಮನೆಗಳಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ.

ಅತ್ಯಾಚಾರ ಎಸಗಿದ ಬಳಿಕ ವೃದ್ಧೆಯನ್ನು ಹತ್ಯೆ ಮಾಡಿರುವ ಆರೋಪಿ, ಬಳಿಕ ಭಯದಿಂದ ತಾನೂ ಸಹ ಅದೇ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ. ಮೃತ ಮಹಿಳೆಯ ಕತ್ತಿನಲ್ಲಿ ಗಾಯದ ಗುರುತುಗಳಿದ್ದು ಫಾರೆನ್ಸಿಕ್ ರಿಪೋರ್ಟ್ ಬಂದ ಬಳಿಕವೇ ಸತ್ಯಾಂಶ ಬಯಲಾಗಲಿದೆ.





















































 
 

ವೃದ್ಧೆಯ ಪತಿ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದು, ಪುತ್ರಿ ಮನೆಯ ಮೇಲ್ಪಹಡಿಯಲ್ಲಿ ವಾಸವಿದ್ದರು. ಆದರೆ ಈ ಘಟನೆಯ ಬಗ್ಗೆ ಪುತ್ರಿಗೆ ತಿಳಿದೇ ಇಲ್ಲ. ವೃದ್ಧೆಯ ಪತಿ ಮನೆಗೆ ಆಗಮಿಸಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

error: Content is protected !!
Scroll to Top