ಫೆ. 7 – 8 ರಂದು ನಡೆಯುವ ವಿದ್ಯಾರ್ಥಿ ಜಾನಪದ ಲೋಕೋತ್ಸವ 2026 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ
ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಮತ್ತು ಕರ್ನಾಟಕ ಸರ್ಕಾರದ ಸಂಸ್ಕೃತಿ ಮತ್ತು ಇಲಾಖೆಯ ಸಹಯೋಗದಲ್ಲಿ ಫೆ. 7 ಮತ್ತು ಫೆ. 8 ರಂದು ರಾಮನಗರದ ಬೆಂಗಳೂರು – ಮೈಸೂರು ಹಳೇ ಹೆದ್ದಾರಿಯಲ್ಲಿರುವ ಜಾನಪದ ಲೋಕದಲ್ಲಿ ‘ವಿದ್ಯಾರ್ಥಿ ಜಾನಪದ ಲೋಕೋತ್ಸವ 2026’ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕಲಾ ಪ್ರದರ್ಶನ, ಗೀತ ಗಾಯನ, ಪ್ರಶಸ್ತಿ ಪ್ರದಾನ, ದೇಸಿ ಮೇಳ, ವಿಚಾರ ಸಂಕಿರಣ ಇತ್ಯಾದಿಗಳು ನಡೆಯಲಿವೆ.
ಫೆ. 7 ರಂದು ರಾಮನಗರ ಶ್ರೀ ಆದಿಚುಂಚನಗಿರಿ ಮಠದ ಶಾಖಾ ಮಠಾಧೀಶ ಶ್ರೀ ಅನ್ನದಾನೇಶ್ವರ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, ಚಲನಚಿತ್ರ ಮತ್ತು ರಂಗಭೂಮಿಯ ಪ್ರಖ್ಯಾತ ನಿರ್ದೇಶಕ ಡಾ. ಟಿ. ಎಸ್. ನಾಗಾಭರಣ ಅವರು ಕಾರ್ಯಕ್ರಮವನ್ನು ಉದಾಘಾಟಿಸಲಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಜಿ ಶಾಸಕ ಮತ್ತು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಕೆ. ರಾಜು ಅವರು ಕರಕುಶಲ ಮೇಳವನ್ನು ಉದ್ಘಾಟಿಸಲಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್. ಎ. ಇಕ್ಬಾಲ್ ಹುಸೇನ್ ಅಧ್ಯಕ್ಷತೆ ವಹಿಸಲಿದ್ದು ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ಕೆ. ವಿ. ಪ್ರಭಾಕರ್ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2 ರಿಂದ ವಿವಿಧ ತಂಡಗಳ ಭಾಗವಹಿಸುವಿಕೆಯಿಂದ ಜನಪದ ಕಲಾ ಪ್ರದರ್ಶನ, ರಾತ್ರಿ 8 ರಿಂದ ಬೈರನಹಳ್ಳಿ ಶಿವರಾಮ್ ಅವರ ನಿರ್ದೇಶನದಲ್ಲಿ ಜನಪದ ಲೋಕದ ಜನಪದ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ‘ಕೆರೆಗೆ ಹಾರ’ ಎಂಬ ಜನಪದ ರೂಪಕ ನಡೆಯಲಿದೆ.
ಫೆ. 8 ರಂದು ಬೆಳಗ್ಗೆ ‘ಯುವಜನರಲ್ಲಿ ಜನಪದ ಗಾಯನ ಮತ್ತು ಕಲೆಗಳ ಸಂವರ್ಧನೆ’ ವಿಷಯದಲ್ಲಿ ಚರ್ಚೆ ಸಂವಾದ ನಡೆಯಲಿದೆ. ಈ ಕಾರ್ಯಕ್ರಮದ ಪ್ರಸ್ತಾವನೆಯನ್ನು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ. ಹಿ. ಚಿ. ಬೋರಲಿಂಗಯ್ಯ ಮಾಡಲಿದ್ದು, ಜನಪದ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಚಿನ್ನಪ್ಪ ಗೌಡ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಹಿರಿಯ ರಂಗಕರ್ಮಿ ಮತ್ತು ಜನಪದ ಸಂವರ್ಧಕ ಶ್ರೀನಿವಾಸ ಜಿ. ಕಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ದಕ್ಷಿಣ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 1: 30 ಗಂಟೆಗೆ ಜನಪದ ಗೀತ ಗಾಯನ 2026 ನಡೆಯಲಿದೆ. ಸಂಜೆ 4 ರಿಂದ ಬುಡಕಟ್ಟು ಕಲೆಗಳ ಆಕರ್ಷಣೆ, ಸಂಜೆ 4.30 ರಿಂದ ಆಧುನಿಕ ಗಾಯಕರ ಜನಪದ ಗೀತ ಸಂಭ್ರಮ ನಡೆಯಲಿದೆ.
ಸಂಜೆ 5:30 ರಿಂದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಮತ್ತು ಮಹಾಪೋಷಕ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದ್ದು, ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಆಂಧ್ರಪ್ರದೇಶದ ವಾಣಿಜ್ಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ, ಲೇಖಕ ಜಯರಾಮ್ ರಾಯಪುರ ಐ.ಆರ್.ಎಸ್. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪ್ರಶಸ್ತಿ ಪುರಸ್ಕೃತರು:
ನಾಡೋಜ ಎಚ್.ಎಲ್. ನಾಗೇಗೌಡ ಜಾನಪದ ಲೋಕಶ್ರೀ ಪ್ರಶಸ್ತಿ (ಶ್ರೀಮತಿ ಶೀಲಾಗೌಡ ಮತ್ತು ಕ್ರಿಸ್ಟಾಫ್ ಸ್ಟಾರ್ಟ್ಸ್, ಬೆಂಗಳೂರು ಇವರು ನೀಡಿರುವ ದತ್ತಿನಿಧಿ ಪ್ರಶಸ್ತಿ): ಪ್ರೊ. ಹಿ.ಶಿ. ರಾಮಚಂದ್ರೇಗೌಡ, ಜಾನಪದ ವಿದ್ವಾಂಸರು, ಮೈಸೂರು
ಡಾ. ಜೀ.ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿ (ಡಾ. ಜಿ.ಶಂ. ಪರಮಶಿವಯ್ಯ ಅವರ ಆಪ್ತರು ಮತ್ತು ಶಿಷ್ಯರು ಸೇರಿ ನೀಡಿರುವ ದತ್ತಿನಿಧಿ ಪ್ರಶಸ್ತಿ):
ಡಾ. ಕೆ. ಚಿನ್ನಪ್ಪಗೌಡ, ಜಾನಪದ ವಿದ್ವಾಂಸರು, ದಕ್ಷಿಣ ಕನ್ನಡ ಜಿಲ್ಲೆ
ನಾಡೋಜ ಡಾ. ಜಿ. ನಾರಾಯಣ ಜಾನಪದ ಲೋಕ ಪ್ರಶಸ್ತಿ: ಕಾಡುಗೊಲ್ಲರ ಗಣೆ ವಾದನ ಕಲಾವಿದರು, ತುಮಕೂರು ಜಿಲ್ಲೆ
ಶ್ರೀಮತಿ ಲಕ್ಷ್ಮಮ್ಮ ನಾಗೇಗೌಡ ಪ್ರಶಸ್ತಿ (ಶ್ರೀಮತಿ ಮಂಗಳಾ ಮೋಹನಗೌಡ ಯು.ಎಸ್.ಎ. ಇವರು ನೀಡಿರುವ ದತ್ತಿನಿಧಿ ಪ್ರಶಸ್ತಿ): ಡಾ. ಸಿರಿಗಂಧ ಶ್ರೀನಿವಾಸಮೂರ್ತಿ ಜನಪದ ಛಾಯಾಗ್ರಾಹಕರು, ಬೆಂಗಳೂರು
ಶ್ರೀ ಎಚ್.ಎಲ್. ನಾಗೇಗೌಡರು ತಮ್ಮ ಅಜ್ಜಿಯಂದಿರು, ತಂದೆ ತಾಯಿ ಮತ್ತು ದೊಡ್ಡಮನೆ ಕುಟುಂಬದವರ ಹೆಸರಿನಲ್ಲಿ ನೀಡಿರುವ ದತ್ತಿನಿಧಿ ಮತ್ತು ಶ್ರೀಮತಿ ಶಾಂತಮ್ಮ ಚಿನ್ನಸ್ವಾಮಿ, ಬೆಂಗಳೂರು ಇವರು ನೀಡಿರುವ ದತ್ತಿನಿಧಿ ಪ್ರಶಸ್ತಿಗಳು, ಜಾನಪದ ಲೋಕ ಪ್ರಶಸ್ತಿ: ಚಿನ್ನಮ್ಮ, ಜೋಗುಳಪದ ಹಾಡುಗಾರರು, ಚಾಮರಾಜನಗರ ಜಿಲ್ಲೆ
ದೇವರಾಜು, ಪೂಜಾ ಮತ್ತು ಮರಗಾಲು ಕುಣಿತ ಕಲಾವಿದರು, ಮಂಡ್ಯ
ಶ್ರೀ ಡಿ.ಕೆ. ಶಿವಕುಮಾರ್, ಮಾನ್ಯ ಉಪ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ – ಇವರು ತಮ್ಮ ತಂದೆ-ತಾಯಿಯಾದ ಶ್ರೀ ಕೆಂಪೇಗೌಡ ಮತ್ತು ಶ್ರೀಮತಿ ಗೌರಮ್ಮ ಹೆಸರಿನಲ್ಲಿ ನೀಡಿರುವ ದತ್ತಿನಿಧಿ ಪ್ರಶಸ್ತಿಗಳು, “ದೊಡ್ಡ ಆಲಹಳ್ಳಿ ಗೌರಮ್ಮ ಕೆಂಪೇಗೌಡ” ಪ್ರಶಸ್ತಿ: ಶಿವಮಾದಯ್ಯ, ಪೂಜಾಕುಣಿತ ಕಲಾವಿದರು, ಬೆಂಗಳೂರು ದಕ್ಷಿಣ ಜಿಲ್ಲೆ
ಭೈರಪ್ಪ (ಗಂಗಣ್ಣ), ಮೂಡಲಪಾಯ ಯಕ್ಷಗಾನ ಕಲಾವಿದರು, ಬೆಂಗಳೂರು ದಕ್ಷಿಣ ಜಿಲ್ಲೆ
ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳು ನೀಡಿರುವ ದತ್ತಿನಿಧಿ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ: ನಾರಾಯಣಪ್ಪ ಮಾಡಶಿರಾವಾರ, ತತ್ವಪದ ಕಲಾವಿದರು, ರಾಯಚೂರು ಜಿಲ್ಲೆ
ಡಾ. ರಾಜೇಗೌಡ ಹೊಸಹಳ್ಳಿಯವರು ತಮ್ಮ ತಾಯಿ ಶ್ರೀಮತಿ ರಂಗಮ್ಮ ಮತ್ತು ತಂದೆ ಶ್ರೀ ಎಚ್.ಎಸ್. ರಂಗಪ್ಪ ಮರಸು ಹೊಸಹಳ್ಳಿ, ಹಾಸನ ಜಿಲ್ಲೆ ಇವರ ನೆನಪಿಗಾಗಿ ನೀಡಿರುವ ದತ್ತಿನಿಧಿ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ: ತಂಬೂರಿ ಸಿದ್ದರಾಜು ಎಂ. ತಂಬೂರಿ ಕಲಾವಿದರು, ಬೆಂಗಳೂರು
ಶ್ರೀ ಕೆ. ಸುಧಾಕರ ಶೆಟ್ಟಿ (ಯು.ಎಸ್.ಎ.) ಇವರು ಶ್ರೀಮತಿ ಪುಫುಲ್ಲ ರಘುರಾಮ ಶೆಟ್ಟಿ ಹಾಗೂ ಶ್ರೀ ವಡ್ಡರ್ಸೆ ರಘುರಾಮ ಶೆಟ್ಟಿ ಇವರ ಸ್ಮರಣಾರ್ಥ ನೀಡಿರುವ ದತ್ತಿನಿಧಿ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ: ಮುತ್ತಪ್ಪ ಬಸವಂತಪ್ಪ ದಾತನಾಳ, ಸಾಹಸ ಕಲಾವಿದರು, ಧಾರವಾಡ ಜಿಲ್ಲೆ
ಶ್ರೀ ಕೆ. ಸುಧಾಕರ ಶೆಟ್ಟಿ (ಯು.ಎಸ್.ಎ.) ಇವರು ಡಾ. ಕೆ. ಮಧುಕರ ಶೆಟ್ಟಿ ಇವರ ಸ್ಮರಣಾರ್ಥ ನೀಡಿರುವ ದತ್ತಿನಿಧಿ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ: ಚನಿಯಪ್ಪನಾಯ್ಕ್, ಯಕ್ಷಗಾನ ವೇಷಧಾರಿ ಕಲಾವಿದರು, ಕಾಸರಗೋಡು, ಕೇರಳ ಜಿಲ್ಲೆ
ಶ್ರೀಮತಿ ಲಿಂಗಮ್ಮ ಮತ್ತು ಶ್ರೀ ಚಿಕ್ಕಕೊಮಾರಿಗೌಡ (ಸಿ.ಕೆ. ಗೌಡ) ಹೆಸರಿನಲ್ಲಿ ನೀಡಿರುವ ದತ್ತಿನಿಧಿ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ: ಟಿ. ಶಾರದಮ್ಮ, ಸೋಬಾನೆ ಹಾಡುಗಾರರು, ಚಿಕ್ಕಮಗಳೂರು ಜಿಲ್ಲೆ
ಶ್ರೀ ಗುರುಮೂರ್ತಿ ಪೆಂಡಕೂರ್, ಅಧ್ಯಕ್ಷರು, ಯುವಕರ ಸಂಘ, ಬಳ್ಳಾರಿ ಜಿಲ್ಲೆ ಇವರು ಶ್ರೀ ವಿರೂಪಾಕ್ಷಗೌಡರ ನೆನಪಿಗಾಗಿ ನೀಡಿರುವ ದತ್ತಿನಿಧಿ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ: ಶ್ರೀಮತಿ ಭಾರತಿಬಾಯಿ, ಲಂಬಾಣಿ ನೃತ್ಯ, ಬೀದರ್ ಜಿಲ್ಲೆ
ಶ್ರೀ ಟಿ. ತಿಮ್ಮೇಗೌಡ ಐ.ಎ.ಎಸ್.(ನಿ), ಬೆಂಗಳೂರು ಅವರು ತಮ್ಮ ತಂದೆ ಶ್ರೀ ದೊಡ್ಡಿ ತಿಮ್ಮೇಗೌಡ ಮತ್ತು ತಾಯಿ ಶ್ರೀಮತಿ ಲಿಂಗಮ್ಮ ಅವರುಗಳ ನೆನಪಿಗಾಗಿ ನೀಡಿರುವ ದತ್ತಿನಿಧಿ ಮತ್ತು ಡಾ. ಎಸ್.ಎಲ್. ತಿಮ್ಮಯ್ಯ, ರಾಮನಗರ ಅವರು ತಮ್ಮ ಮಗಳು ಮತ್ತು ಮೊಮ್ಮಕ್ಕಳ ನೆನಪಿಗಾಗಿ ನೀಡಿರುವ ದತ್ತಿನಿಧಿ ಮತ್ತು ಶ್ರೀ ಹ.ಕ. ರಾಜೇಗೌಡ, ಹನುಮನಹಳ್ಳಿ, ಮಂಡ್ಯ ಅವರು ತಮ್ಮ ತಂದೆ ದಿವಂಗತ ಕಪನೀಗೌಡ ಮತ್ತು ತಾಯಿ ದಿ॥ ಶ್ರೀಮತಿ ನಿಂಗಮ್ಮ ಅವರುಗಳ ನೆನಪಿಗಾಗಿ ನೀಡಿರುವ ದತ್ತಿನಿಧಿ ಮತ್ತು ಶ್ರೀಮತಿ ರೇಣುಕಾ ರಾಮಕೃಷ್ಣ, ಯು.ಎಸ್.ಎ. ಇವರು ಶ್ರೀ ನಂಜಪ್ಪ ಮತ್ತು ಶ್ರೀಮತಿ ನಂಜಮ್ಮ ಅವರ ನೆನಪಿಗಾಗಿ ನೀಡಿರುವ ದತ್ತಿನಿಧಿ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ: ಬಿ.ಎಸ್. ಗೌಡ (ಬೀರಪ್ಪ ಶಿವು ಗೌಡ), ಹಾಲಕ್ಕಿ ಯಕ್ಷಗಾನ ಕಲಾವಿದರು, ಉತ್ತರ ಕನ್ನಡ ಜಿಲ್ಲೆ
ಶ್ರೀ ಕೆ. ಅಮರನಾರಾಯಣ ಐ.ಎ.ಎಸ್. (ನಿ) ಅವರು ತಮ್ಮ ತಂದೆ – ತಾಯಿಯವರಾದ ಶ್ರೀಮತಿ ನಾರಾಯಣಮ್ಮ ಮತ್ತು ಶ್ರೀ ಕೆಂಪರೆಡ್ಡಿ ಅವರ ಹೆಸರಿನಲ್ಲಿ ನೀಡಿರುವ ದತ್ತಿನಿಧಿ ಮತ್ತು ಬೆಂಗಳೂರಿನ ಕರ್ನಾಟಕ ಜಾನಪದ ಕಂಸಾಳೆ ಕಲಾ ಸಂಘ ಸಂಸ್ಥೆಯ ಸ್ಥಾಪಕರಾದ ದಿವಂಗತ ಶ್ರೀಹೆಬ್ಬಣಿ ಮಾದಯ್ಯ ಅವರ ನೆನಪಿಗಾಗಿ ನೀಡಿರುವ ದತ್ತಿನಿಧಿ ಮತ್ತು ಡಾ. ಟಿ. ತಿಪ್ಪೇಸ್ವಾಮಿಯವರು ವಿದ್ಯಾರತ್ನ ಡಾ. ಟಿ. ತಿಪ್ಪೇಸ್ವಾಮಿ ಅವರ ಹೆಸರಿನಲ್ಲಿ ನೀಡಿರುವ ದತ್ತಿನಿಧಿ ಮತ್ತು ದಿ. ಶ್ರೀ ಎಲ್. ಚಿಕ್ಕಪ್ಪಾಜಿ, ವಕೀಲರು ರಾಮನಗರ ಅವರು ತಂದೆ ಸಿ. ಲಿಂಗೇಗೌಡ ಮತ್ತು ತಾಯಿ ಶಿವಮ್ಮ ಅವರ ನೆನಪಿಗಾಗಿ ನೀಡಿರುವ ದತ್ತಿನಿಧಿ ಮತ್ತು ಶ್ರೀ ಹೊಸಮನಿ ಚಿದಾನಂದ ಅವರು ತಾಯಿ ದಿ. ಶ್ರೀಮತಿ ರುದ್ರಮ್ಮ ಮತ್ತು ತಂದೆ ದಿ. ಶ್ರೀ ನಾಗೇಂದ್ರಪ್ಪ ಅವರ ಹೆಸರಿನಲ್ಲಿ ನೀಡಿರುವ ದತ್ತಿನಿಧಿ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ: ಡಾ. ಎಸ್. ರತ್ನಮ್ಮ, ಸೋಲಿಗ ಕಲಾವಿದರು, ಚಾಮರಾಜನಗರ ಜಿಲ್ಲೆ
ಪ್ರೊ. ಬಾಲಕೃಷ್ಣ ಆದಪ್ಪ ಜಂಬಗಿ, ಬೆಳಗಾವಿ ಜಿಲ್ಲೆ ಇವರು ತಮ್ಮ ತಾಯಿ “ದಿ. ಗಂಗವ್ವ ಆದಪ್ಪ ಜಂಬಗಿ” ಇವರ ಸ್ಮರಣಾರ್ಥ ನೀಡಿರುವ ದತ್ತಿನಿಧಿ ಮತ್ತು ಶ್ರೀ ವೆಂಕಟಗಿರಿ ಅವರು ತಮ್ಮ ತಾಯಿ ಮತ್ತು ತಂದೆಯವರಾದ ಶ್ರೀಮತಿ ಸಾಕಮ್ಮ ಮತ್ತು ಶ್ರೀ ಹುಚ್ಚೇಗೌಡರು ಹೆಸರಿನಲ್ಲಿ ನೀಡಿರುವ ದತ್ತಿನಿಧಿ ಮತ್ತು ಶ್ರೀ ಎಂ. ಕೃಷ್ಣಪ್ಪ, ಬೆಂಗಳೂರು ಅವರು ತಮ್ಮ ತಂದೆ ಶ್ರೀ ಮುನಿಸ್ವಾಮಪ್ಪ ಹಾಗೂ ತಾಯಿ ರಂಗಮ್ಮನವರ ನೆನಪಿಗಾಗಿ ನೀಡಿರುವ ದತ್ತಿನಿಧಿ ಮತ್ತು ಡಾ. ಎನ್.ಎಸ್. ರಾಮೇಗೌಡ, ಬೆಂಗಳೂರು ಅವರು ನೀಡಿರುವ ದತ್ತಿನಿಧಿ ಪ್ರಶಸ್ತಿ ಜಾನಪದ ಲೋಕ ಪ್ರಶಸ್ತಿ: ಗಂಗಪ್ಪ ಮಹಾಲಿಂಗಪ್ಪ ಕರಡಿ, ಕರಡಿ ಮಜಲು ಕಲಾವಿದರು, ಬಾಗಲಕೋಟೆ ಜಿಲ್ಲೆ
ಶ್ರೀ ಬಿ.ಕೆ. ಶ್ರೀನಿವಾಸ ಮೂರ್ತಿ, ದಾವಣಗೆರೆ ಜಿಲ್ಲೆ, ಇವರು ನೀಡಿರುವ ದತ್ತಿನಿಧಿ ಮತ್ತು ಶ್ರೀ ಸು.ತ.ರಾಮೇಗೌಡ, ರಾಮನಗರ ಜಿಲ್ಲೆ ಇವರು ಅವರ ಅಜ್ಜಿ ಮತ್ತು ತಾತಂದಿರಾದ ದಿ. ಶ್ರೀಮತಿ ಮರಗಮ್ಮ ಶ್ರೀ ಚನ್ನೇಗೌಡ ಸುಳ್ಳೇರಿ ಅವರ ನೆನಪಿಗಾಗಿ ನೀಡಿರುವ ದತ್ತಿನಿಧಿ ಮತ್ತು ಪ್ರೊ. ಸಿ.ಜಿ. ಪುರುಷೋತ್ತಮ, ಕೇರಳಾಪುರ ಅವರು ತಮ್ಮ ತಾತ ಶ್ರೀ ಶಂಭೂಗೌಡ ಪುರುಷೋತ್ತಮ ಅವರ ನೆನಪಿಗಾಗಿ ನೀಡಿರುವ ದತ್ತಿನಿಧಿ ಮತ್ತು ಶ್ರೀಮತಿ ಸಾವಿತ್ರಮ್ಮ, ಮೈಸೂರು ಅವರು ತಮ್ಮ ಪತಿ ದಿ. ಚಂದ್ರಶೇಖರ ಅವರ ನೆನಪಿಗಾಗಿ ನೀಡಿರುವ ದತ್ತಿನಿಧಿ ಮತ್ತು ಶ್ರೀ ಜೆ. ಕಲೀಬಾಷ ಅವರು ದಿ. ಶ್ರೀಮತಿ ಸೋಫೀಯಾ ಬಿ. ಮತ್ತು ಜಮಾಲ್ ಸಾಬ್ ಅವರ ಹೆಸರಿನಲ್ಲಿ ನೀಡಿರುವ ದತ್ತಿನಿಧಿ ಮತ್ತು ದಿ. ಶ್ರೀ ಎಲ್. ಚಿಕ್ಕಪ್ಪಾಜಿ, ವಕೀಲರು ರಾಮನಗರ ಅವರು ತಂದೆ ಸಿ. ಲಿಂಗೇಗೌಡ ಮತ್ತು ತಾಯಿ ಶಿವಮ್ಮ ಅವರ ನೆನಪಿಗಾಗಿ ನೀಡಿರುವ ದತ್ತಿನಿಧಿ ಮತ್ತು ಶ್ರೀ ಹಲಗಪ್ಪನವರ ರುದ್ರಪ್ಪ ಅವರು ತಂದೆ ಲೇಟ್ ಹಲಗಪ್ಪನವರ ಸಿದ್ದಲಿಂಗಪ್ಪ ಮತ್ತು ತಾಯಿ ಕನ್ನಮ್ಮ ಉರೂಫ್ ಬಸಮ್ಮ ಅವರ ಹೆಸರಿನಲ್ಲಿ ನೀಡಿದ ದತ್ತಿನಿಧಿ ಮತ್ತು ಶ್ರೀ ಕಚ್ಚಿಗೆರೆ ಸಿದ್ದೇಗೌಡರು ಶ್ರೀ ಆಚಾರ್ಯ ಕಾಕಾ ಕಾಲೇಲ್ಕರ್ ಮತ್ತು ವಿದ್ವಾನ್ ಶ್ರೀ ಎನ್. ರಂಗನಾಥ್ ತರ ಅವರ ನೆನಪಿಗಾಗಿ ನೀಡಿದ ದತ್ತಿನಿಧಿ ಪ್ರಶಸ್ತಿ ಜಾನಪದ ಲೋಕ ಪ್ರಶಸ್ತಿ: ಎಂ. ಬಸವರಾಜು, ಗೊರವ ಕುಣಿತ ಕಲಾವಿದರು, ಬೆಂಗಳೂರು ಉತ್ತರ
ಬೆಂಗಳೂರಿನ ಸವಿಗನ್ನಡ ಸರ್ವಮಂಗಳಾ ಅವರು ತಮ್ಮ ತಾಯಿ ಶ್ರೀಮತಿ ಆರ್. ಸರಸ್ವತಿ ಮತ್ತು ತಂದೆ ಶ್ರೀ ಎಂ. ಲಿಂಗಯ್ಯ ಅವರ ನೆನಪಿನಲ್ಲಿ ನೀಡಿರುವ ದತ್ತಿನಿಧಿ ಪ್ರಶಸ್ತಿ ‘ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ’:
ಪುಸ್ತಕ : “ಸ್ವಾತಂತ್ರ್ಯದ ಕಿಡಿಗಳು” ಲೇಖಕರು : ಶ್ರೀ ಹೂಲಿ ಶೇಖರ್, ಬೆಂಗಳೂರು
























