ನವದೆಹಲಿ: ಕಾಂಗ್ರೆಸ್ ಜೊತೆ ಕೇರಳದ ಕೈ ನಾಯಕ ಶಶಿ ತರೂರ್ ಸಂಬಂಧ ಚೆನ್ನಾಗಿಲ್ಲ ಎನ್ನುವ ಮಾತನ್ನು ತಳ್ಳಿ ಹಾಕಿರುವ ತರೂರ್, ರಾಹುಲ್ ಗಾಂಧಿ ನಾಯಕತ್ವವನ್ನು ಶ್ಲಾಘಿಸಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅವರು, ಕೋಮುವಾದವನ್ನು ವಿರೋಧಿಸುವ ಸ್ಪಷ್ಟ ರಾಜಕೀಯ ನಿಲುವು ಹೊಂದಿರುವ ನಾಯಕ ರಾಹುಲ್ ಗಾಂಧಿ ಎಂದು ಹೇಳಿದ್ದಾರೆ. ಎಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕ ರಾಹುಲ್ ಗಾಂಧಿಯನ್ನು ಭೇಟಿಯಾದ ಒಂದು ದಿನದ ಬಳಿಕ ತರೂರ್ ಈ ಮಹತ್ವದ ಹೇಳಿಕೆಯನ್ನು ನೀಡಿರುವುದಾಗಿದೆ.
ಪಕ್ಷ ತೊರೆಯುವ ಊಹಾಪೋಹದ ಬಗೆಗೂ ಮಾತನಾಡಿದ ಅವರು, ಇಂತಹ ಕಥೆಗಳನ್ನು ನಾನು ಕಳೆದ 17 ವರ್ಷಗಳಿಂದ ಕೇಳುತ್ತಿದ್ದೇನೆ. ನಾನು ಮುಂದುವರೆಯುತ್ತಿರುವದು ಸೌಜನ್ಯ ಮತ್ತು ಪ್ರೀತಿಯಿಂದ ಎಂದು ಹೇಳಿದ್ದಾರೆ.
























