ಐಟಿ ದಾಳಿ ಬೆನ್ನಲ್ಲೇ ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ. ಜೆ. ರಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಬೆಂಗಳೂರು: ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದ, ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ. ಜೆ. ರಾಯ್ ಅವರು ಪಿಸ್ತೂಲಿನಿಂದ ಶೂಟ್ ಮಾಡಿಕೊಂಡು, ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಶವವನ್ನು ಅನೇಕಲ್‌ನ ನಾರಾಯಣ ರಾವ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಅಶೋಕನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅವರ ಕಂಪನಿಗೆ ಪದೇ ಪದೇ ಐಟಿ ಅಧಿಕಾರಿಗಳು ದಾಳಿ ಮಾಡುತ್ತಿದ್ದು, ಇದರಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಇಂದು ಕೂಡ ಐಟಿ ದಾಳಿ ನಡೆದಿದ್ದು, ಈ ವೇಳೆ ಅವರು ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧ್ಯಾಹ್ನದ ವೇಳೆ ಐಟಿ ದಾಳಿ ನಡೆದಿದ್ದು, ರಾಯ್ ಅವರನ್ನು ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ಮಾಡಿದ್ದಾರೆ.





















































 
 

ಅಧಿಕಾರಿಗಳಿಗೆ ದಾಖಲೆ ನೀಡುವ ಸಲುವಾಗಿ ಅವುಗಳನ್ನು ತರಲು ರೂಮ್ ‌ಗೆ ತೆರಳಿದ್ದು, ಈ ವೇಳೆ ಗುಂಡು ಹಾರಿಸಿಕೊಂಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಜೀವ ಹೋಗಿದೆ. ಡಿಸಿಪಿ ಅಕ್ಷಯ್ ಅವರ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಗುಂಡು ಹಾರಿಸಿಕೊಂಡ ಪಿಸ್ತೂಲ್ ಅನ್ನು ವಶಕ್ಕೆ ಪಡೆಯಲಾಗಿದೆ. ಸಿಸಿ ಟಿವಿ ಪರಿಶೀಲನೆ ನಡೆಸಲಾಗಿದೆ.

ಡೆತ್ ನೋಟ್ ಇದೆಯೇ, ಮೊಬೈಲ್ ಪರಿಶೀಲನೆ ಸಹ ನಡೆಸಲಾಗಿದೆ.

error: Content is protected !!
Scroll to Top