ಸಾಲಗಾರರ ಕಾಟ: ವ್ಯಕ್ತಿ ಆತ್ಮಹತ್ಯೆ

ಹಾಸನ: ಸಾಲಗಾರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ದೊಡ್ಡಪುರ ಬಳಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಮೂಲದ ಕೃಷ್ಣಪ್ಪ ಎಂಬವರೇ ಮೃತ ದುರ್ದೈವಿ.

ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೆಲ್ಫಿ ‌ವಿಡಿಯೋ ಮಾಡಿರುವ ಅವರು, ಒಂದು ಲಕ್ಷ ರೂ. ಸಾಲಕ್ಕೆ ಬರೋಬ್ಬರಿ 40 ಲಕ್ಷ ರೂಪಾಯಿಯ ಕೇಸ್. ಈ ಕಿರುಕುಳವನ್ನು ‌ನಾನು ಇನ್ಯಾವ ಕಾಲಕ್ಕೆ ತಡೆದುಕೊಳ್ಳಲಿ ಎಂದು ಕಣ್ಣೀರಿಟ್ಟಿದ್ದಾರೆ.





















































 
 

ನೆಲಮಂಗಲದ ರಮೇಶ್ ಮತ್ತು ಮಂಜು ಎಂಬವರ ಹೆಸರನ್ನು ಉಲ್ಲೇಖ ಮಾಡಿದ್ದು, ನಾನು ಪಡೆದದ್ದು ಕೇವಲ ಒಂದು ಲಕ್ಷ ರೂ. ಸಾಲ. ಆದರೆ ಅವರು ನನ್ನ ಮೇಲೆ 40 ಲಕ್ಷದ ಚೆಕ್ ಕೇಸ್ ದಾಖಲಿಸಿ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ನಾನು ಜಾಮೀನು ಪಡೆಯುವುದಕ್ಕೂ ಹಣವಿಲ್ಲದೆ ಪರದಾಡುತ್ತಿದ್ದೇನೆ ಎಂದಿದ್ದಾರೆ. ಹಾಗೆಯೇ ತಮ್ಮ ಪತ್ನಿಯ ಬಳಿ ಕ್ಷಮೆ ಯಾಚಿಸಿರುವ ಅವರು ನಾನು ಸೋತು ಹೋದೆ ಎಂದಿದ್ದಾರೆ.

ವಿಷ ಕುಡಿದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top