ಪತ್ನಿ ಮತ್ತೊಬ್ಬನ ಜೊತೆ ಪರಾರಿ: ಪತಿ ನೇಣಿಗೆ ‌ಶರಣು

ದಾವಣಗೆರೆ: ವಿವಾಹವಾದ ಎರಡೇ ತಿಂಗಳಿಗೆ ಪತ್ನಿ ಮತ್ತೊಬ್ಬನ ಜೊತೆ ಪರಾರಿಯಾಗಿದ್ದು, ಘಟನೆಯಿಂದ ಮನನೊಂದ ಪತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಮ್ಮನೂರಿನಲ್ಲಿ ನಡೆದಿದೆ.

ಹರೀಶ್ (32) ಮೃತ ದುರ್ದೈವಿ.

ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಹರೀಶ್ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತನ್ನ ಪತ್ನಿ ಮತ್ತೊಬ್ಬನ ಜೊತೆಗೆ ಓಡಿ ಹೋಗಿರುವುದನ್ನು ಉಲ್ಲೇಖ ಮಾಡಿದ್ದಾರೆ. ಹಾಗೆಯೇ ತನ್ನ ಸಾವಿಗೆ ಪತ್ನಿ, ಅತ್ತೆ, ಮಾವ ಮತ್ತು ಅವಳನ್ನು ಕರೆದುಕೊಂಡು ಹೋದ ಯುವಕನೇ ಕಾರಣ ಎಂದು ಹೇಳಿದ್ದಾರೆ.





















































 
 

ಹರೀಶ್ ಮೇಲೆ ಪತ್ನಿ ಇಲ್ಲಸಲ್ಲದ ಆರೋಪ ಮಾಡಿದ್ದು, ಪ್ರಾಣ ಬೆದರಿಕೆ ಸಹ ಹಾಕಿದ್ದಳು. ಇದರಿಂದ ಮನನೊಂದು ಸಾಯುತ್ತಿರುವುದಾಗಿ ಬರೆದಿದ್ದಾರೆ. ಹಾಗೆಯೇ ಬಸವ ಧರ್ಮದ ಪ್ರಕಾರ ತನ್ನ ಅಂತ್ಯ ಸಂಸ್ಕಾರ ನಡೆಸುವಂತೆ ತಿಳಿಸಿದ್ದಾರೆ. ಆ ಬಳಿಕ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top