ಆಪರೇಷನ್ ಸಿಂಧೂರ್ ‌ನಿಲ್ಲಿಸುವಂತೆ ಪಾಕಿಸ್ತಾನ ಮನವಿ ಮಾಡಿತ್ತು: ಭಾರತ

ನ್ಯೂಯಾರ್ಕ್: ಈ ಹಿಂದೆ ಪಾಕಿಸ್ತಾನದ ವಿರುದ್ಧ ನಡೆಸಿದ್ದ ಆಪರೇಷನ್ ಸಿಂಧೂರ್ ‌ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ‌ಪಾಕ್ ಬೇಡಿಕೊಂಡಿತ್ತು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಭಾರತ ತಿಳಿಸಿದೆ‌. ಜೊತೆಗೆ ಇಸ್ಲಾಮಾಬಾದ್‌ನ ಬಾಹ್ಯ ಹಸ್ತಕ್ಷೇಪದ ಹಕ್ಕುಗಳನ್ನು ತಳ್ಳಿ ಹಾಕಿದೆ.

ಭಾರತದ ಶಾಶ್ವತ ಪ್ರತಿನಿಧಿ ಪಿ. ಹರೀಶ್ ಭಾರತದ ಪರವಾಗಿ ಮಾತನಾಡಿದ್ದು, ನಮ್ಮ ನಾಗರಿಕರನ್ನು ಕಾಪಾಡಲು, ಅವರ ಹಿತ ರಕ್ಷಣೆಯ ದೃಷ್ಟಿಯಿಂದ ಎಲ್ಲವನ್ನೂ ಮಾಡಲು ನಾವು ಸಿದ್ಧರಿದ್ದೇವೆ. ಭಯೋತ್ಪಾದನೆಯನ್ನು ಪಾಕಿಸ್ತಾನ ಬಯಸಿದ ರೀತಿಯಲ್ಲಿ ಸಾಮಾನ್ಯೀಕರಿಸುವುದು ಅಸಾಧ್ಯ ಎಂದು ಅವರು ಹೇಳಿದ್ದಾರೆ.

ಪಹಲ್ಗಾಮ್‌ನಲ್ಲಿ ನಾಗರಿಕರ ಮೇಲೆ ಪಾಕ್ ದಾಳಿ ನಡೆಸಿದ ಮೇಲೆ, ಪಾಕಿಸ್ತಾನದ ಉಗ್ರ ನೆಲೆಗಳನ್ನು ಗುರಿಯಾಗಿಸಿ ಭಾರತ ಆಪರೇಷನ್ ಸಿಂಧೂರ್ ನಡೆಸಿತ್ತು. ಆರಂಭದಲ್ಲಿ ಭಾರತದ ಮೇಲೆ ದಾಳಿ ಹೆಚ್ಚಿಸುವ ಬೆದರಿಕೆ ಹಾಕುತ್ತಿದ್ದ ಪಾಕಿಸ್ತಾನ ನಂತರದಲ್ಲಿ ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸುವಂತೆ ಭಾರತದ ಬಳಿ ಮನವಿ ಮಾಡಿತ್ತು ಎಂದು ಅವರು ತಿಳಿಸಿದ್ದಾರೆ.





















































 
 

ಪಾಕಿಸ್ತಾನದ ವಾಯುನೆಲೆಗಳಿಗೆ ಆಗಿರುವೆ ಹಾನಿಯ ಪ್ರಮಾಣವನ್ನು ಅವರು ಎತ್ತಿ ತೋರಿಸಿದರು. ಅದರಲ್ಲಿ ನಾಶವಾದ ರನ್‌ವೇಗಳು ಮತ್ತು ಸುಟ್ಟುಹೋದ ಹ್ಯಾಂಗರ್‌ಗಳು ಸೇರಿದಂತೆ ವಿನಾಶವನ್ನು ತೋರಿಸುವ ಚಿತ್ರಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.

error: Content is protected !!
Scroll to Top