ನವದೆಹಲಿ: ಮೂಲಭೂತವಾಗಿ ಭಾರತ ಹಿಂದೂ ರಾಷ್ಟ್ರ. ಅದನ್ನು ಹೊಸದಾಗಿ ಘೋಷಣೆ ಮಾಡಲು ಯಾವುದೇ ಸಾಂವಿಧಾನಿಕ ಅನುಮೋದನೆಯ ಅಗತ್ಯ ಇಲ್ಲ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಬಿಹಾರದಲ್ಲಿ ನಡೆದ ವಿಚಾರಗೋಷ್ಠಿಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ ಎನ್ನುವ ವಿಷಯ ಹೇಗೆ ಸತ್ಯವೋ, ಭಾರತ ದೇಶ ಹಿಂದೂ ರಾಷ್ಟ್ರ ಎನ್ನುವುದು ಕೂಡಾ ಅಷ್ಟೇ ಸತ್ಯ ಎಂಬುದಾಗಿ ತಿಳಿಸಿದ್ದಾರೆ. ಅದನ್ನು ಮತ್ತೆ ಘೋಷಣೆ ಮಾಡುವ ಅಗತ್ಯ ಇಲ್ಲ. ಈಗಾಗಲೇ ಅದು ಅಸ್ತಿತ್ವದಲ್ಲಿದೆ. ಭಾರತೀಯ ಸಂಸ್ಕೃತಿಯನ್ನು ಗೌರವಿಸುವವರೆಲ್ಲರೂ ಭಾರತದ ಅವಿಭಾಜ್ಯ ಅಂಗ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ಸಮಾಜದಲ್ಲಿ ವೈವಿಧ್ಯತೆ ಇದೆಯೇ ಹೊರತು ವಿಭಜನೆ ಇಲ್ಲ. ನಮ್ಮಲ್ಲಿ ಒಡಕು ಮಾಡಿಸಿ ಬ್ರಿಟೀಷರು ಭಿನ್ನಾಭಿಪ್ರಾಯಗಳನ್ನು ದೊಡ್ಡದು ಮಾಡಿದರು. ನಾವೆಲ್ಲರೂ ಬೇಧಭಾವ ಮರೆತು ಹಿಂದೂ ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಅವರು ನುಡಿದಿದ್ದಾರೆ.
























