ವಿದ್ಯಾರಶ್ಮಿ ವಿದ್ಯಾಲಯದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ

ಸವಣೂರು: ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಚರಿಸಲಾದ 77ನೆಯ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸಂಸ್ಥೆಯ ಸಂಚಾಲಕ ಸಹಕಾರಿ ರತ್ನ ಸವಣೂರು ಸೀತಾರಾಮ ರೈ ಕೆ. ಧ್ವಜಾರೋಹಣಗೈದರು.

ಬಳಿಕ ಮಾತನಾಡಿದ ಅವರು, ಗಣರಾಜ್ಯೋತ್ಸವ ದಿನದ ಮಹತ್ವವನ್ನು ಮುಂದಿನ ಪರಂಪರೆಗೂ ಮಕ್ಕಳು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಮಕ್ಕಳು ತಮ್ಮ ಹೆತ್ತವರು ಮತ್ತು ಸಹಪಾಠಿಗಳನ್ನು ಪ್ರೀತಿಸುವಂತೆ ನಮ್ಮ ದೇಶದ ಸಂವಿಧಾನ ಮತ್ತು ಕಾನೂನನ್ನು ಪ್ರೀತಿಸಿ ಗೌರವಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜಲಕ್ಷ್ಮಿ ಎಸ್. ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಆಳ್ವ, ಬೋಧಕ-ಬೋಧಕೇತರ ವೃಂದ ಉಪಸ್ಥಿತರಿದ್ದರು.





















































 
 

ಪ್ರಥಮ ಪಿಯುಸಿ ಶ್ರುತಜೈನ್ ಮತ್ತು ಬಳಗ ಧ್ವಜಗೀತೆ ಹಾಡಿದರು. 7ನೇ ತರಗತಿಯ ಕೃಪಾಲಿ ಸ್ವಾಗತಿಸಿ, ಮೋಕ್ಷ ವಂದನಾರ್ಪಣೆಗೈದರು. 8ನೇ ತರಗತಿ ಆಯಿಷತ್ ಜಸ್ನ ಸಂವಿಧಾನ ಪೀಠಿಕೆ ವಾಚಿಸಿ, ಶಂತನುಕೃಷ್ಣ ಕೆ. ಎ. ಗಣರಾಜ್ಯೋತ್ಸವದ ಮಹತ್ವ ಬಗ್ಗೆ ವಿವರಿಸಿದರು. 10 ನೇ ತರಗತಿಯ ಸಂಜಯ್ ಕಾರ್ಯಕ್ರಮ ನಿರೂಪಣೆಗೈದರು.

error: Content is protected !!
Scroll to Top