ಆಲುಂಬುಡ, ಪುತ್ತೂರು: ಎವಿಜಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್’ನ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ 77ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪುತ್ತೂರು ವಿಧಾನಸಭಾ ಕ್ಷೇತ್ರದ ಪೂರ್ವ ಶಾಸಕರಾದ ಸಂಜೀವ ಮಟಂದೂರು ಅವರು ಧ್ವಜಾರೋಹಣಗೈದು, ದೀಪ ಪ್ರಜ್ವಲಿಸಿ ಮಾತನಾಡಿ ಗಣರಾಜ್ಯೋತ್ಸವದ ಸಂದೇಶ ನೀಡುತ್ತಾ
ಯಾವುದು ಸರಿ ಯಾವುದು ತಪ್ಪು ಎಂದು ತಿಳಿಸಿಕೊಡುವುದೇ ಸಂವಿಧಾನ. ರಾಜ ಪರಂಪರೆಯಿಂದ ಬೆಳೆದ ಭಾರತ ಇಂದು ಸ್ವಯಂ ಆಡಳಿತದ ಸರ್ವತಂತ್ರ ಗಣತಂತ್ರ ಪರಂಪರೆಗೆ ಬಂದು ನಿಂತಿದೆ ಎಂದು ವಿಶ್ಲೇಷಿಸಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನದ ಶಿಲ್ಪಿಯಾಗಿದ್ದಾರೆ ಎಂದರು. ಮುಂದುವರಿದು ಮಾತನಾಡಿ ಧರ್ಮ ಮತ್ತು ರಾಷ್ಟ್ರ ನಿರ್ಮಾಣ ಜೊತೆಯಾಗಿ ಸಾಗಬೇಕಿದೆ ಎಂದು ಪ್ರತಿಪಾದಿಸಿದರು.

ಮಾಜಿ ಸೈನಿಕರಿಗೆ ಗೌರವಾರ್ಪಣೆ
ಭಾರತೀಯ ಸೇನೆಯ ಮಾಜಿ ಸುಬೇದಾರ್ ಮೇಜರ್ ಚಂದ್ರಶೇಖರ್ ಗೌಡ ಗುಂಡೋಲೆ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು ಯೋಧರು ದೇಶದ ಸಾರ್ವಭೌಮತೆಯನ್ನು ಕಾಪಾಡುತ್ತಾರೆ. ಅಂತಹ ಸೇವೆಯನ್ನು ಈ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಗುರುತಿಸಿರುವುದು ಎಳೆಯ ಮಕ್ಕಳಿಗೆ ಉತ್ತಮ ಮಾದರಿಯಾಗಿದೆ ಎಂದರು. ಶಿಸ್ತೇ ಜೀವನದ ಜೀವಾಳ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಅವರು ಮಾತನಾಡಿ ಗಣರಾಜ್ಯೋತ್ಸವಕ್ಕೆ ಅರ್ಥ ಬರಬೇಕಾದರೆ ನಾವೆಲ್ಲ ನಮ್ಮ ನಮ್ಮ ಕರ್ತವ್ಯವನ್ನು ಮಾಡಬೇಕು ಎಂದರು.
ಶಿಕ್ಷಕಿ ಅನುರಾಧಾ ಅವರು ಗಣರಾಜ್ಯೋತ್ಸವದ ವಿಶೇಷ ಉಪನ್ಯಾಸ ನೀಡಿದರು. 6ನೇ ತರಗತಿಯ ಅದ್ವಿಕ್ ಬಂಜನ್, 1ನೇ ತರಗತಿಯ ಅನಿಕಾ, 2ನೇ ತರಗತಿಯ ಶಿವಾನಿ ಮತ್ತು 4ನೇ ತರಗತಿಯ ಜ್ಯೋತ್ಸ್ನಾ ಎ.ಎನ್. ಗಣರಾಜ್ಯೋತ್ಸವ ಭಾಷಣ ನೀಡಿದರು. 3ನೇ ತರಗತಿಯ ಅದಿತಿ ಬಂಜನ್ ಮತ್ತು 5ನೇ ಮತ್ತು 2ನೇ ತರಗತಿಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ರಾಷ್ಟ್ರೋತ್ಥಾನ ಗೀತೆಗಳನ್ನು ಹಾಡಿದರು.
ಶಾಲಾ ನಿರ್ದೇಶಕಿ ಶ್ರೀಮತಿ ಪ್ರತಿಭಾದೇವಿ ನಾರಾಯಣ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ವಿದ್ಯಾರ್ಥಿನಿಯರಾದ ಜ್ಞಾನ, ಶ್ರೀವಿಕಾ, ಹನಿ, ಅನಿಕಾ, ಚೇತನಾ ಮತ್ತು ಕೀರ್ತಿ ಪ್ರಾರ್ಥನೆ, ವಿದ್ಯಾರ್ಥಿ ವಿಖ್ಯಾತ್ ಸಂವಿಧಾನ ಪೀಠಿಕೆ ವಾಚನ, ಶಿಕ್ಷಕಿ ಹರ್ಷಿತಾ ಮಾನಪತ್ರ ವಾಚನ, ಸಂಚಾಲಕ ಎ. ವಿ. ನಾರಾಯಣ ಸ್ವಾಗತ, ಶಿಕ್ಷಕಿ ರಂಜಿತಾ ರೈ ವಂದನಾರ್ಪಣೆ
ಮತ್ತು ಶಿಕ್ಷಕಿ ರೀಮ ಲೋಬೊ ಕಾರ್ಯಕ್ರಮ ನಿರೂಪಣೆಗಳಲ್ಲಿ ಸಹಕರಿಸಿದರು. ಉಪಾಧ್ಯಕ್ಷ ಉಮೇಶ್ ಮಳುವೇಲು ಮತ್ತು ಪ್ರಾಂಶುಪಾಲ ಅಮರನಾಥ್ ಪಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
























