10 ರೂ.ಗೆ ಲಭ್ಯ ನಂದಿನಿ ಹಾಲು, ಮೊಸರು

ಹೊಸ ಪ್ಯಾಕೆಟ್‌ ಮಾರುಕಟ್ಟೆಗೆ ಬಿಡುಗಡೆ

ಬೆಂಗಳೂರು: ಇನ್ನು ಮುಂದೆ ನಂದಿನಿ ಹಾಲು ಮತ್ತು ಮೊಸರು 10 ರೂ.ಗಳ ಪ್ಯಾಕೆಟ್‌ನಲ್ಲೂ ಸಿಗಲಿದೆ. ನಂದಿನಿ ಮಳಿಗೆಗಳಲ್ಲಿ 10 ರೂ. ಮೌಲ್ಯದ ಹಾಲು, ಮೊಸರಿನ ಪ್ಯಾಕೆಟ್‌ಗಳೊಂದಿಗೆ ಮೀಡಿಯಂ ಫ್ಯಾಟ್‌ ಇರುವ ಪನೀರ್‌, ಹೈ ಆರೋಮ ತುಪ್ಪ, ಪ್ರೊಬಯಾಟಿಕ್‌ ಮಾವಿನ ಲಸ್ಸಿ, ಡೇರಿ ವೈಟ್ನರ್‌ ಸೇರಿದಂತೆ ಒಟ್ಟು ಹತ್ತು ಹೊಸ ಉತ್ಪನ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು.

ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳ (ಕೆಎಂಎಫ್‌) ನಂದಿನಿ ಬ್ರ್ಯಾಂಡ್‌ನ ಹಾಲು 160 ಎಂಎಲ್‌ಗೆ 10 ರೂ. ಹಾಗೂ ಮೊಸರು 140 ಎಂಎಲ್‌ ಪ್ಯಾಕ್‌ಗೆ 10 ರೂ. ಮೌಲ್ಯದಲ್ಲಿ ಮಾರುಕಟ್ಟೆಗೆ ಬಿಟ್ಟಿದೆ. ಈವರೆಗೆ 200 ಎಂಎಲ್‌ನ ಪ್ಯಾಕೆಟ್‌ ಇತ್ತು. ಕೆಲವೊಮ್ಮೆ ಮನೆಯಲ್ಲೇ ಒಬ್ಬರೇ ಇದ್ದರೆ 200 ಎಂಎಲ್‌ ಹೆಚ್ಚಾಗಿ ಉಳಿಯುತ್ತಿತ್ತು.





















































 
 

ಫ್ರಿಜ್‌ ಇಲ್ಲದಿರುವವರಿಗೆ ಹಾಲು/ಮೊಸರು ಸಂಗ್ರಹಿಸಿಡುವುದು ಕಷ್ಟವಾಗುತ್ತಿತ್ತು. ಹೀಗಾಗಿ, ತಾಜಾ ಹಾಲು/ಮೊಸರು ದಿನಕ್ಕಾಗುವಷ್ಟನ್ನು ತಂದು ಬಳಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಡಿಮೆ ಮೊತ್ತಕ್ಕೆ ಕಡಿಮೆ ಪ್ರಮಾಣದಲ್ಲಿ ಬಳಸಲು ನೆರವಾಗುತ್ತದೆ.

error: Content is protected !!
Scroll to Top