ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಒಡಿಶಾದಿಂದ 286 ಕೆಜಿ ತೂಕದ ಚಿನ್ನದ ಧನಸ್ಸು ಸಮರ್ಪಣೆಯಾಗಿದೆ.
ಈ ಧನಸ್ಸನ್ನು ತಮಿಳುನಾಡಿನ ಕಾಂಚೀಪುರಂನ ಮಹಿಳಾ ಕುಶಲಕರ್ಮಿಗಳ ನೈಪುಣ್ಯದಿಂದ ತಯಾರು ಮಾಡಲಾಗಿದೆ.
ಇದನ್ನು ತಯಾರಿಸಲು ಚಿನ್ನ, ಬೆಳ್ಳಿ, ತಾಮ್ರ, ಸತು, ಕಬ್ಬಿಣ ಮೊದಲಾದ ಮಿಶ್ರ ಲೋಹದಿಂದ ತಯಾರಿಸಲಾಗಿದೆ. ಇದರ ನಿರ್ಮಾಣ ಕಾರ್ಯ ಒಡಿಶಾದಲ್ಲಿ ಪೂರ್ಣಗೊಂಡಿದೆ.
























