ಕಲಬುರ್ಗಿ: ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದ ಮಹಿಳೆಯೊಬ್ಬಳು ವಿವಾಹವಾದ ಕೇವಲ ಎರಡೇ ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಸಿದ್ದೇಶ್ವರ ಕಾಲನಿಯಲ್ಲಿ ನಡೆದಿದೆ.
ನೇಣಿಗೆ ಶರಣಾದ ಮಹಿಳೆಯನ್ನು ಅನುಸೂಯ ಆಕಡೆ (26) ಎಂದು ಗುರುತಿಸಲಾಗಿದೆ.
ಅನುಸೂಯಾ ತನ್ನ ಅತ್ತೆ ಮಗ ಅವಿನಾಶ್ ಎನ್ನುವವರನ್ನು ಕುಟುಂಬ ವರ್ಗದ ಸಮ್ಮುಖದಲ್ಲೇ ಎರಡು ತಿಂಗಳ ಹಿಂದೆ ಮದುವೆಯಾಗಿದ್ದಳು. ಆದರೆ ಮದುವೆಯ ನಂತರ ಗಂಡನ ಜೊತೆಗೆ ಹಳ್ಳಿಯಲ್ಲಿ ಜೀವನ ನಡೆಸುವ ವಿಚಾರದಲ್ಲಿ ಆಕೆ ಬೇಸತ್ತಿದ್ದಳು. ಆಕೆಯ ಮೂವರು ಸಹೋದರಿಯರು ಬೆಂಗಳೂರು, ಮುಂಬೈ ಮೊದಲಾದ ಮಹಾನಗರಗಳಲ್ಲಿ ವಾಸಿಸುತ್ತಿದ್ದು, ತಾನು ಮಾತ್ರ ಹಳ್ಳಿಯಲ್ಲಿ ಜೀವನ ನಡೆಸಬೇಕು ಎಂದು ಮಾನಸಿಕವಾಗಿ ನೊಂದು ಆತ್ಮಹತ್ಯೆಯ ದಾರಿ ಹಿಡಿದಿದ್ದಾಳೆ ಎನ್ನಲಾಗುತ್ತಿದೆ.
























