ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಯಾವಾಗ ಗೊತ್ತಾ?

ಪುತ್ತೂರು: ಮೂವತ್ತಮೂರನೇ ವರ್ಷದ ಪ್ರಖ್ಯಾತ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳವು ಜ. 24 -25 ರಂದು ನಡೆಯಲಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿನ ದೇವರಮಾರು ಗದ್ದೆಯಲ್ಲಿ ‌ನೂರಾರು ಜೋಡಿ ಕೋಣಗಳು ಸ್ಪರ್ಧಿಸುವ ಮೂಲಕ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಬಾರಿ ನಡೆಯುವ ಈ ಐತಿಹಾಸಿಕ ಕಂಬಳಕ್ಕೆ ಪ್ರತಿ ಬಾರಿಯಂತೆ ಚಲನಚಿತ್ರ ತಾರೆಯರು, ಪ್ರಖ್ಯಾತ ವ್ಯಕ್ತಿಗಳು ಆಗಮಿಸುವ ಮೂಲಕ ಕಂಬಳದ ಮೆರುಗನ್ನು ಹೆಚ್ಚಿಸಲಿದ್ದಾರೆ.

ನಟಿ ಪ್ರಿಯಾಂಕ ಉಪೇಂದ್ರ, ಬಿಗ್‌ಬಾಸ್‌ ನಲ್ಲಿ ಫಸ್ಟ್ ರನ್ನರ್ ಅಪ್ ಆದ ರೀಲ್ಸ್ ತಾರೆ ರಕ್ಷಿತಾ ‌ಶೆಟ್ಟಿ, ನಟ ಆದಿತ್ಯ, ಶ್ರೇಯಾನ್ ಮಂಜು, ಧರ್ಮ ಕೀರ್ತಿ ರಾಜ್, ಶನಿಲ್ ಗುರು, ಜೆ. ಪಿ. ಶೆಟ್ಟಿ ತುಮಿನಾಡು, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವಾರು ಗಣ್ಯರು ಆಗಮಿಸಿ, ಕಂಬಳಕ್ಕೆ ಮತ್ತಷ್ಟು ಕಳೆ ತಂದುಕೊಡಲಿದ್ದಾರೆ.





















































 
 
error: Content is protected !!
Scroll to Top