ಪುತ್ತೂರು: ನ್ಯಾಯಾಧೀಶರ ಎದುರೇ ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಕಾವು ಮಾಣಿಯಡ್ಕ ನಿವಾಸಿ ರವಿ ಎನ್ನುವವರೇ ವಿಷ ಕುಡಿದ ವ್ಯಕ್ತಿ.
ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ರವಿ ಮತ್ತು ಅವರ ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು. ಎರಡು ದಿನಗಳ ಹಿಂದೆ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡುವ ಪ್ರಯತ್ನ ಸಹ ಮಾಡಿದ್ದರು. ಈ ವಿಷಯವಾಗಿ ಪೊಲೀಸ್ ಕೇಸ್ ಆಗುವ ಸಾಧ್ಯತೆ ಸಹ ಇತ್ತು. ದಂಪತಿಯ ನಡುವೆ ಡಿವೋರ್ಸ್ ಮಾತುಕತೆ ಸಹ ನಡೆಯುತ್ತಿತ್ತು. ಇಂದು ವಿಚಾರಣಾ ಹಿನ್ನೆಲೆ ರವಿಯನ್ನು ಪೊಲೀಸರು ಠಾಣೆಗೆ ಕರೆಸಿದ್ದರು.
ಆದರೆ ರವಿ ನೇರವಾಗಿ ನ್ಯಾಯಾಲಯಕ್ಕೆ ಹೋಗಿ ವಿಷ ಸೇವನೆ ಮಾಡಿರುವುದಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಈ ಸಂದರ್ಭದಲ್ಲಿ ಆತನ ಪತ್ನಿಯೇ ಕೋಪ ಮರೆತು ತನ್ನ ಪತಿಯ ಜೊತೆ ತೆರಳಿದ್ದಾರೆ.
























