ರೈಲಿನ ಶೌಚಾಲಯ ಲಾಕ್ ಮಾಡಿ, ಎರಡು ಗಂಟೆ ಒಳ ಸೇರಿದ ಜೋಡಿ: ಸಾರ್ವಜನಿಕರಿಂದ ತರಾಟೆ

ನವದೆಹಲಿ: ರೈಲಿನ ಶೌಚಾಲಯದೊಳಗೆ ಸೇರಿಕೊಂಡ ಲಾಕ್ ಮಾಡಿ ಜೋಡಿಯೊಂದು ಎರಡು ಗಂಟೆಗೂ ಅಧಿಕ ಕಾಲ ಅದರೊಳಗೆ ಕಳೆದು ಬೇರೆ ಪ್ರಯಾಣಿಕರ ಆಕ್ರೋಶಕ್ಕೆ ತುತ್ತಾದ ಘಟನೆ ನಡೆದಿದ್ದು, ಈ ಬಗ್ಗೆ ಪ್ರಶ್ನೆ ಮಾಡಿದಾಗ ಯುವತಿ ನೀಡಿದ ಹಾರಿಕೆಯ ಉತ್ತರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಕೆಂಗಣ್ಣಿಗೂ ತುತ್ತಾಗಿದೆೆ.

ಎರಡು ಗಂಟೆಯ ಬಳಿಕ ಶೌಚಾಲಯದಿಂದ ಹೊರ ಬಂದ ಜೋಡಿಯನ್ನು ಸಹ ಪ್ರಯಾಣಿಕರು ಪ್ರಶ್ನಿಸಿದ್ದು, ಈ ವೇಳೆ ಯುವತಿ ನನ್ನ ಇಷ್ಟ. ಯಾರನ್ನು ಒಳಗೆ ಕರೆದುಕೊಂಡು ಹೋಗಬೇಕು ಎನ್ನುವುದು ನನ್ನ ಆಯ್ಕೆ ಎಂದು ಹೇಳಿದ್ದು, ಇದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಜೋಡಿ ಒಳಗಿನಿಂದ ಲಾಕ್ ಮಾಡಿದ್ದರಿಂದ ಇತರ ಪ್ರಯಾಣಿಕರು ಶೌಚಾಲಯಕ್ಕೆ ಹೋಗಲಾಗದೆ ತೊಂದರೆ ಅನುಭವಿಸಿದ್ದಾರೆ. ಆ ಬಳಿಕ ರೈಲು ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ.





















































 
 

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಇದು ಒಯೋ ರೂಮ್ ಅಲ್ಲ ರೈಲು ಎಂದು ಸಾರ್ವಜನಿಕರು ಜೋಡಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

error: Content is protected !!
Scroll to Top